Thursday, March 17, 2011

ಕನ್ನಡ ವ್ಯಾಕರಣ

ಕನ್ನಡ
ಪಠ್ಯ ಕ್ರಮ
1. ವ್ಯಾಕರಣ
2. ಛಂದಸ್ಸು
3 ಅಲಂಕಾರ
4. ಸಾಹಿತ್ಯ ಚರಿತ್ರೆ
I. ವ್ಯಾಕರಣ
ಭಾಷೆಯ ಸ್ವರೂಪ ಜ್ನಾನ ಅರ್ಥಗಳಲ್ಲದೆ ಉಚ್ಛಾರ ಶೃತಿಗಳನ್ನು ವ್ಯವಸ್ಥಿತವಾಗಿ ನಿಯಮಗಳ
ಮೂಲಕ ತಿಳೀಸುವುದೇ ವ್ಯಾಕರಣ ಶಾಸ್ತ
ವ್ಯಾಕರಣದ ಬಗ್ಗೆ ತಿಳಿಸುವುವರು ವೈಯಾಕರಣಿಗಳು
II ಛಂದಸ್ಸು
ಕಾವ್ಯರಚನೆ ಸೌಂಧರ್ಯ ಸೊಭಗತೆಯನ್ನು ಸೂತ್ರ ರೊಪದಲ್ಲಿ ಪರಿಚಯಿಸುದೇ ಛಂದಸ್ಸು ಶಾಸ್ತ್ರ
II. ಅಲಂಕಾರಗಳು
ಕಾವ್ಯದೇವಿಯನ್ನು ಶಬ್ಧ ಅರ್ಥಗಳ ಉಡುಗೆತೊಡಿಗೆಗಳಿಂದ ಶೋಭಿಸುವಂತೆ
ಅಲಂಕರಿಸುವುದೇ ಅಲಂಕಾರ ಶಾಸ್ತ್ರ
ಮೇಲಿನ ಮೂರು ಪ್ರಕರಣ ಅಂದರೆ ವ್ಯಾಕರಣ, ಛಂದಸ್ಸು ಮತ್ತು
ಅಲಂಕಾರಗಳನ್ನೊಳಗೊಂಡ ಗ್ರಂಥಕ್ಕೆ ಲಕ್ಷಣ ಗ್ರಂಥ ಎನ್ನುವರು.
ಮೊಟ್ಟ ಮೊದಲಿಗೆ ಹಳಗನ್ನಡದಲ್ಲಿ ವ್ಯಾಕರಣದ ಬಗ್ಗೆ ಹೇಳಿದವನು
1. 2ನೇ ನಾಗವರ್ಮ ಅಥವಾ ಇಮ್ಮಡಿ ನಾಗವರ್ಮ
ಕಾಲ: 11ನೇ ಶತಮಾನ
ಕೃತಿಗಳು
1. ಕರ್ನಾಟಕ ಭಾಷಾ ಭೂಷಣ
2. ಕಾವ್ಯಾವಲೋಕನ
3. ವರ್ಧಮಾನ ಪುರಾಣ
4. ಅಭಿದಾನ ವಸ್ತು ಕೋಶ
5. ಛಂದೋ ವಿಚಿತಿ
2. ಕನ್ನಡ ಶ್ರೇಷ್ಠ ವೈಯಾಕರಣಿ ಮತ್ತು ಶ್ರೇಷ್ಠ ಗ್ರಂಥ
ಕೇಶಿ ರಾಜ
ಕಾಲ: 13 ನೇ ಶತಮಾನ (1260)
ಶ್ರೇಷ್ಠ ಕೃತಿ: ಶಬ್ಧಮಣಿದರ್ಪಣ ಇದರಲ್ಲಿ 8 ಭಾಗಗಳಿವೆ
3. ಭಟ್ಟಾಕಳಂಕಾ
ಕಾಲ: 16 ಮತ್ತು 17 ನೆ ಶತಮಾನ
ಕೃತಿ : ಶಬ್ಢ ಅನುಶಾಸನ. ಇದು ಸಂಸ್ಕೃತದಲ್ಲಿದೆ
ಪ್ರಸ್ತುತ ಕನ್ನಡ ವರ್ಣಮಾಲೆ 49
ಸ್ವರಗಳು
ಕನ್ನಡದಲ್ಲಿ ಒಟ್ಟು ಸ್ವರಗಳು 13 ಇದರಲ್ಲಿ 3 ವಿಧಗಳು
1. ಹ್ರಸ್ವ ಸ್ವರ: ಒಂದು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳು ,
ಉದಾ: ಅ ಇ ಉ ಋ ಎ ಒ ( ಒಟ್ಟು 6)
2. ದೀರ್ಘಸ್ವರ: ಎರಡು ಮಾತ್ರೆ ಕಾಲದಲ್ಲು ಉಚ್ಛರಿಸಲ್ಪಡುವ ಅಕ್ಷರಗಳು
ಉದಾ: ಆ ಈ ಊ ಏ ಐ ಓ ಔ (ಒಟ್ಟು 7)
3. ಪ್ಲುತ ಸ್ವರ : ಮೂರು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳು,
ಇದಕ್ಕೆ ಕನ್ನಡದಲ್ಲಿ ಪದಗಳಿಲ್ಲ ಅಂಗ್ಲಭಾಷೆಯ "S" ಅಕ್ಷರದಿಂದ ಗುರಿತಿಸಲ್ಪಡುತ್ತದೆ
ಉದಾ: ಆಣ್ಣಾs ತಮ್ಮಾs ಗೆಳೆಯಾs, ಗುರುಗಳೇs
ವ್ಯಂಜನಗಳು
ಕನ್ನಡದಲ್ಲಿ ವ್ಯಂಜನಗಳು ಒಟ್ಟು 34 ಇದರಲ್ಲಿ 2 ವಿಧಗಳು
1. ವರ್ಗೀಯ ವ್ಯಂಜನಗಳು ಒಟ್ಟು 25 ವರ್ಣಮಾಲೆಯ ಅಕ್ಷರಗಳು ಕ ಯಿಂದ ಮ ವರಗೆ
2. ಅವರ್ಗೀಯ ವ್ಯಂಜನಗಳು ಒಟ್ಟು 9 ಉದಾ: ಯ ರ ಲ ವ ಶ ಷ ಸ ಹ ಳ
ಅನುನಾಸಿಕಗಳು
ಮೂಗಿನ ಸಹಾಯದಿಂದ ಉಚ್ಛರಿಸಲ್ಪಡುವ ವರ್ಣಮಾಲೆಯ 5 ನೇ ಅಕ್ಶರಗಳು
ಯೋಗವಾಹಕಗಳು: ಸ್ವರಗಳೊಂದಿಗೆ ಸಂಬಂಧಹೊಂದಿ ಉಚ್ಛರಿಸಲ್ಪಡುವ ಅಕ್ಷರಗಳು
( ಯೋಗ = ಸಂಬಂಧ, ಮತ್ತು ವಾಹ= ಹೊಂದಿದ)
ಇವುಗಳನ್ನು ಅನುಸ್ವರ (೦) ಮತ್ತು ವಿಸರ್ಗ (ಃ) ಎನ್ನುತ್ತಾರೆ
ಗುಣಿತಾಕ್ಷರಗಳು
ಸ್ವರವನ್ನು ಪಡೆದು ಪೂರ್ಣವಾಗುವ ಅಕ್ಷರಕ್ಕೆ ಗುಣಿತಾಕ್ಷರ ಅಥವಾ ಕಾಗುಣಿತ ಎನ್ನುತ್ತಾರೆ
ಉದಾ: ಕ್+ಅ=ಕ, ಕ್+ಆ=ಕಾ, ಕ್+ಇ=ಕಿ, ಕ್+ಈ=ಕೀ
ಉ, ಊ ಮತ್ತು ಒ, ಓ ಸ್ವರ ಚಿಹ್ನೆಗಳು "ವ" ಕಾರಕ್ಕೆ ಮಾತ್ರ ಕೆಳಗಿನಿಂದ ಸೇರಿಸಲ್ಪಡುತ್ತದೆ.
ಉಳಿದೆಲ್ಲವುಗಳಿಗೆ ಮುಂದಿನಿಂದ ಸೇರಿಸಲ್ಪಡುತ್ತದೆ.
ಕಾಗುಣಿತಾಕ್ಷರವನು ವಿಭಜಿಸುವುದೆ
ಉದಾ: ಭಾರತ = ಬ್+ಆ+ರ್+ಅ+ತ್+ಅ
ಕಾವೇರಿ: ಕ್+ಆ+ವ್+ಏ+ರ್+ಇ\
ರೇಡಿಯೋ: ರ್+ಏ+ಡ್+ಇ+ಯ್+ಓ
ಜೊಕಾಲಿ: ಜ್+ಓ+ಕ್+ಆ+ಲ್+ಇ
ಮೈಸೂರು: ಮ್+ಐ+ಸ್+ಊ+ರ್
ಹೃದಯ: ಹ್+ಋ+ದ್=ಅ+ಯ್=ಅ
ಕಂಬ: ಕ್+ಂ+ಬ್+ಅ
ಅಂತಃಕರಣ: ಅ+ಂ+ತ್+ಅ+ಃ+ಕ್+ಅ+ರ್+ಅ+ಣ್+ಅ
ಆಜ್ನೆ : ಆ+ಜ್ನ್+ಏ
ರಾಷ್ಟ್ರ: ರ್+ಆ+ಷ್+ಟ್+ರ್+ಆ
ಸ್ತ್ರೀ: ಸ್+ತ್+ರ್+ಈ
ಸಂಯುಕ್ತಾಕ್ಷರಗಳು (ದ್ವಿತ್ವ)
ಎರಡು ಅಥವಾ ಅದಕಿಂತ ಹೆಚ್ಚು ಸ್ವರವನ್ನು ಪಡೆದುಕೊಳ್ಳುವುದು
ಉದಾ: ಪುಸ್ತಕ. ಹೊತ್ತಿಗೆ, ಪೆನ್ನು. ಅಪ್ಪ. ಅಮ್ಮ. ಅತ್ತೆ ಇತ್ಯಾದಿ
ಇದರಲ್ಲಿ ಎರಡು ವಿಧ ಸಜಾತಿ ಮತ್ತು ವಿಜಾತಿ ಸಂಯುಕ್ತಾಕ್ಷರಗಳು
ಒಂದೇ ಜಾತಿಯ ಎರಡು ವ್ಯಂಜನಗಳು ಸ್ವರವನ್ನು ಪಡೆದುಕೊಳ್ಳುವುದು:
ಉದಾ: ಅಕ್ಕ, ಅಮ್ಮ. ಅತ್ತೆ. ಕತ್ತೆ, ಹುಗ್ಗು, ಅನ್ನ ಇತ್ಯಾಧಿ
ಬೇರೆ ಬೇರೆ ಜಾತಿಯ ವ್ಯೆಂಜನಗಳು ಸ್ವರವೊಂದ್ದನ್ನು ಪಡೆದುಕೊಳ್ಳುವುದು:
ಉದಾ: ಅಗ್ನಿ, ಸ್ನೇಹ, ವಿನ್ಯಾಸ, ಸನ್ಯಾಸಿ, ಇತ್ಯಾದಿ
ಉಚ್ಚಾರಣೆಯು ಮಹಾಪ್ರಾಣದಂತೆ ಉಚ್ಛಾರವಾದರೆ ಅದರ ಅಲ್ಪಪ್ರಾಣಕ್ಕೆ
ಮಾತ್ರ ಮಹಪ್ರಾಣದ ವ್ಯಂಜನವನ್ನೇ ಒತ್ತಕ್ಷರಾವಾಗಿ ಬರಬೇಕು
ಉದಾ:
ಶುದ್ಧ ಅಶುದ್ಧ
ವಿಟ್ಠಲ ವಿಠ್ಠಲ
ಅಶ್ವತ್ಥಾಮ ಅಶ್ವಥಾಮ
ಮುಟ್ಠಾಳ ಮುಟ್ಟಾಳ
ನಿರ್ಧಿಷ್ಟ ಅರ್ಥವನ್ನು ಕೊಡುವ ಪದಗಳ ಸಮೂಹ
ನಾಮ ಪದ ( ನಾಮ ಪ್ರಕೃತಿ): ಭಾಷೆಯಲ್ಲಿನ ಬಗೆ ಬಗೆಯ ಹೆಸರುಗಳನ್ನು
ತಿಳಿಸುವುದೇ ನಾಮ ಪದ(ಪ್ರಕೃತಿ) ಉದಾ: ರಾಮ, ಸೀತೆ, ಗಿಡ ಮರ, ಇತ್ಯಾದಿ
ಇದರಲ್ಲಿ 2 ವಿಧ
ಸಹಜ ನಾಮಪದ: ಮೂಲದಿಂದಲೂ ಸಹಜವಾಗಿ ಬಳಕೆಯಾಗುವ ಪದಗಳು
ಉದಾ: ರಾಮ, ಸೀತೆ, ಗಿಡ, ಮರ, ಶಾಲೆ ಇತ್ಯಾದಿ
ಸಾಧಿತ ನಾಮಪದ: ಒಂದು ನಾಮಪದವು ತಧ್ಧಿತ ಪ್ರತ್ಯಯೇ ಪಡೆದು ಇನ್ನೊಂದನ್ನು
ಪಡೆದುಕೊಳ್ಳುವುದು, ಅಥವಾ 2ಅಥವಾ 2 ಕಿಂತ ಹೆಚ್ಚುನಾಮ್ಪಪದಗಳು ಸೇರಿ ಒಂದೆ ಪದ
ಸಿದ್ಧಗೊಳ್ಳುವುದು ಅಥವಾ ಧಾತು ಅಥವಾ ಕ್ರಿಯಾ ಪ್ರತೇಯವನ್ನು ಪಡೆದು ಪದ ಸಿದ್ಧಗೊಂಡರೆ
ಅದಕ್ಕೆ ಸಾಧಿತ ನಾಮ ಪದ ಎನ್ನುವರು
ಉದಾ: ಮಾಲೆ+ಗಾರ= ಮಾಲೆಗಾರ
ಕನಸು + ಇದ್ದರೆ; ಕನಸುಗಾರ
ಹೃದಯ+ವಂತ+ ಹೃದಯವಂತ
----------------------------------------------------------------------
ವಿಭಕ್ತಿ ಪ್ರತ್ಯೇಯಗಳು
1.ಪ್ರಥಮ ಉ ರಾಮನು(ಉ)
2 ದ್ವಿತೀಯ ಅನ್ನು ರಾಮನನ್ನು(ಅನ್ನು)
3 ತೃತೀಯಾ ಇಂದ ರಾಮನಿಂದ(ಇಂದ
4.ಚತುರ್ಥಿ ಗೆ ರಾಮನಿಗೆ(ಗೆ)
5 ಪಂಚಮಿ ದೆಸೆಯಿಂದ (ರಾಮನ ದೆಸೆಯಿಂದ)
6 ಷಷ್ಥಿ ಅ ರಾಮನ(ಅ)
7 ಸಪ್ತಮಿ ಅಲ್ಲಿ ರಾಮನಲ್ಲಿ(ಅಲ್ಲಿ)
8 ಅಷ್ಟಮಿ ಓ ಓ ರಾಮ(ಓ)
-------------------------------------------------------------------------
ನಾಮಪದಗಳಲ್ಲಿ 4 ವಿಧ ಇವುಗಳನ್ನು ಅವುಗಳ ಸ್ಬರೂಪದ ಹಿನ್ನೆಲೆಯಲ್ಲಿ ವಿಂಗಡಿಸಲಾಗಿದೆ.
I ವಸ್ತು ವಾಚಕ ನಾಮಪದ: ವಸ್ತು ಹೆಸರುಗಳನ್ನು ತಿಳಿಸುವ ಶಬ್ದಗಳು:
ಉದಾ: ರಾಮ..ಸೀತೆ, ಗುಡ್ದ, ಬೆಟ್ಟ, ಇತ್ಯಾದಿ
ಇದರಲ್ಲಿ 3 ವಿಧ
1. ರೂಡನಾಮ: ರೂಡಿಯಿಂದ ಬಂದ ಹೆಸರುಗಳು
ಉದಾ: ಹುಡುಗ, ಹುಡುಗಿ ಮನುಷ್ಯ ಇತ್ಯಾದಿ
2. ಅಂಕಿತನಾಮ: ಗುರುತಿಸಲು ಬಳಿಸುವ ಪದಗಳು
ಉದಾ: ರಾಮ. ಸೀತೆ, ಬೆಂಗಳೂರು, ಭಾರತ
3. ಅನ್ವರ್ಥನಾಮ: ಅಂಗವ್ಯಕಲ್ಯ ಮತ್ತು ವೃತ್ತಿಯನ್ನು ಗುರಿತಿಸುವುದು;
ಉದಾ: ಕುಂಟ, ಕುರುಡ, ವೈದ್ಯ. ಶಿಕ್ಷಕಿ, ವಕೀಲ,
II. ವಿಶೇಷಣ ವಾಚಕ: ಗುಣ ಮತ್ತು ಸ್ವಭಾವಗಳನ್ನು ತಿಳಿಸುವುದು.
ವಿಶೇಷಣ ವಿಶೇಷ
ಬಿಳಿಯ ಬಟ್ಟೆ
ಓಡುವ ಗಾಡಿ
ಸುಂದರ ಯುವತಿ
ಭವ್ಯ ಕಟ್ಟಡ
ಪವತ್ರ ಗಂಗೆ
ಹಿರಿಯ ವಿಜ್ನಾನಿ
ಕೊದ್ದಂಡ ರಾಮ
ಕರಿಯಾ ಮೋಡ
ಚಿಕ್ಕ ಬಾಲೆ
ಶ್ರೇಷ್ಠ ಕಾವ್ಯ
ಇದರಲ್ಲಿ 5 ವಿಧಗಳು
1 ಗುಣವಾಚಕ: ಗುಣಸ್ವರೂಪಗಳನ್ನು ತಿಳಿಸುವ ನಾಮಪದ
ಉದಾ: ದೊಡ್ಡ, ಚಿಕ್ಕ, ಒಳ್ಳೆಯ ಕೆಟ್ಟ, ಇತ್ಯಾದಿ
2. ಸಂಖ್ಯಾವಾಚಕ: ಸಂಖ್ಯಗಳನ್ನು ತಿಳಿಸುವ ಪದಗಳು
ಉದಾ: ಒಂದಾನೊಂದು, ಎಂಟನೇಯ ತರಗತಿ,
ಮೂರನೇ ದರ್ಜೆ, ಇಮ್ಮಡಿ,ನಾಲ್ವಡಿ,
3. ಪರಿಮಾಣವಾಚಕ: ನಿರ್ಧಿಷ್ಟವಲ್ಲದ ಪರಿಮಣ ಮತ್ತು ಗಾತ್ರವನ್ನು ತಿಳಿಸುವುದು, \
ಉದಾ: ಸ್ವಲ್ಪ. ಕಡಿಮೆ, ಹೆಚ್ಛು. ಹಲವು, ಕೆಲವು, ಸುಮಾರು ಇತ್ಯಾದಿ.
4. ಪ್ರಕಾರವಾಚಕ: ನಿಜಸ್ಥಿತಿಯನ್ನು ತಿಳಿಸುವುದು.
ಅಂಥ, ಇಂಥ, ಎಂಥ, ಅಂಥಹಾ, ಇಂಥಹಾ,
5. ದಿಗ್ವಾಚಕ: ದಿಕ್ಕುಗಳನ್ನು ತಿಳಿಸುವುದು:
ಊದಾ: ಉಈಪೂಅದನೈಪವ
ಮೂಪಬತೆಂ
ಸರ್ವನಾಮಗಳು: ನಾಮಪದಕ್ಕೆ ಬದಲಾಗಿ ಬಳಿಸುವ ಪದಗಳು ಇದರಲಿ 4 ವಿಧ
1. ಪುರುಷಾರ್ಥಕ, 2ಆತ್ಮಾರ್ಥಕ 3ಪ್ರಶ್ನಾರ್ಥಕ 4. ನೆರ್ದೇಶನಾತ್ಮಕ/ ದರ್ಶಕ
ಪುರುಷಾರ್ಥಕ: ಪುರುಷಗಲ ಹಿನ್ನೆಲೆಯಲ್ಲಿ ವರ್ಗೀಕರಣಕೊಂಡ ಸರ್ವನಾಮ
ಪುರುಷ ಏಕವಚನ ಬಹುವಚನ
ಉತ್ತಮ ನಾನು ನಾವು
ಮದ್ಯಮ ನೀನು ನೀವು
ಪ್ರಥಮ ಪುಲಿಂಗ ಅವನು ಅವರು
ಸ್ತ್ರೀಲಿಂಗ ಅವಳು ಅವರು
ನ. ಲಿಂಗ ಅದು ಅವು.

2. ಆತ್ಮಾರ್ಥಕ: ತಾನು ಮತ್ತು ತಾವು
3. ಪ್ರಶ್ನಾರ್ಥಕ: ಪ್ರಶ್ನಿಸುವಂತ ನಾಮಪದಗಳು:ಉದಾ: ಯಾವನೋ, ಯಾವುದು, ಏಕೆ,
4. ನಿರ್ದೇನಾತ್ಮಕ: ಸ್ಪಷ್ಟವಾಗಿ ಮತ್ತು ನಿರ್ಧಿಷ್ಟವಾಗಿ ನಿರ್ದೇಶಿಸುವುದು
ಉದಾ: ತಾಜ್ ಮಹಲ್ ಕಲ್ಲಿನಲ್ಲಿ ಅರಳಿದ ಪ್ರೇಮ ಕಾವ್ಯ
ಗೋಲಗುಮ್ಮಟ ಜಗತ್ಪ್ರಸಿದ್ದ ಕಟ್ಟಡ
ಭಾವನಾಮಗಳು; ಗುಣ, ಸ್ವಭಾವ, ಸ್ಥಿತಿ, ಕ್ರೀಯೆಗಳನ್ನು ತಿಳಿಸುವುದು.
ಉದಾ: ಸಿಟ್ಟು, ಸಂತೋಷ, ಕೋಪ, ತಾಪ, ಅಳು, ನಗು,

ಸಂಧಿಗಳು
ಸ್ವರ ಅಥವಾ ವ್ಯಂಜನದ ಎರಡು ಅಕ್ಷರಗಳ ನಡುವೆ ಕಾಲವಿಳಂಬವಿಲ್ಲದೆ ಮತ್ತು
ಮೂಲ ಅರ್ಥಕ್ಕೆ ವ್ಯತೆಯುಂಟಾಗದಂತೆ ಸೇರಿಸಿ ಉಚ್ಛರಿಸುವುದೇ ಸಂಧಿ
ಪೂರ್ವ ಪದದ ಅಂತ್ಯ ಮತ್ತು ಉತ್ತರ ಪದದ ಆದಿ ಅಕ್ಷರಗಳ ನಡುವೆ ಕೂಡುವ ಪದವೇ ಸಂಧಿ
ಪೂರ್ವ ಪದ+ಉತ್ತರ ಪದ = ಸಂಧಿ ಪದ
ಭಾಷೆಯ ಆದರದ ಮೇಲೆ ಸಂಧಿಗಳು ಎರಡು ವಿಧ
ಕನ್ನಡ ಸಂಧಿಗಳು ಮತ್ತು ಸಂಸ್ಕೃತ ಸಂಧಿಗಳು
ಕನ್ನಡ ಸಂಧಿಗಳು 3 ಲೋಪ,, ಆಗಮ. ಮತ್ತು ಅದೇಶ ಸಂಧಿಗಳು
ಸ್ವರ ಸಂಧಿ
ಸ್ವರ+ಸ್ವರ ಉದಾ: ಅವನ+ಊರು= ಅವನೂರು
ವ್ಯಂಜನ ಸ್ವರ
ವ್ಯಂಜನ + ಸ್ವರ ಉದಾ: ಹಳ್+ಕನ್ನಡ=ಹಳಗನ್ನಡ
ವ್ಯಂಜನ+ವ್ಯಂಜನ
ಕಣ್+ಪನಿ=ಕಂಬನಿ
ಎರಡು ಕನ್ನಡದ ಒರೆಗಳ ಕೂಡಿಕೆ/ಸೇರಿಕೆ/ಕಲೆತ.
ಮೂರು ಕನ್ನಡದ ಒರೆಗೂಡಿಕೆಗಳು.
ಲೋಪ ಸಂಧಿ
ಸಂಧಿಯಾಗುವಾಗ ಸ್ವರದ ಮುಂದೆ ಸ್ವರವು ಬಂದಾಗ, ಅರ್ಥವು ಕೆಡದಿದ್ದ ಪಕ್ಷದಲ್ಲಿ
ಪೂರ್ವಪದದ ಕೊನೆಯ ಸ್ವರವು ಲೋಪವಾಗುವುದು.
ಉದಾ:- ಮತ್ತು(ಉ)+ಒಬ್ಬ=ಮತ್ತೊಬ್ಬ.ಇಲ್ಲಿ ಪೂರ್ವಪದದ ಕೊನೆಯ ಸ್ವರ 'ಉ' ಕಾರ ಲೋಪವಾಗಿದೆ.
ಉದಾ:- ಅಲ್ಲಿ(ಇ)+ಅಲ್ಲಿ=ಅಲ್ಲಲ್ಲಿ.ಇಲ್ಲಿ ಪೂರ್ವಪದದ ಕೊನೆಯ ಸ್ವರ 'ಇ'ಕಾರ ಲೋಪವಾಗಿದೆ.

ಇಲ್ಲಿ "ಅರ್ಥವು ಕೆಡದಿದ್ದ ಪಕ್ಷದಲ್ಲಿ" ಎಂದು ಕೇಳುವಾಗ, ಸಂಧಿ ಮಾಡುವವರು ಅರ್ಥ
ಕೆಡುವುದೇ ಇಲ್ಲವೇ ಎಂದು ಹೇಳಲು ಹಲವು ಸರತಿ ಆಗುವುದಿಲ್ಲ.
ಮಾದರಿ: ಬಾಳನ್ನು = ಬಾಳೆ + ಅನ್ನು ? ಇಲ್ಲವೆ ಬಾಳು + ಅನ್ನು ?
ಒಂದು ವೇಳೆ ಬಾಳೆ + ಅನ್ನು = ಬಾಳನ್ನು ಅಂದರೆ ಇಲ್ಲಿ ಅರ್ಥ ಹೇಗೆ ಕಟ್ಟಿದೆ, ಹೇಳಲು ಸಾಧ್ಯವಿಲ್ಲ.
ಆದುದರಿಂದ ಇಂತಹ ಹಲವು ಸನ್ನಿವೇಶಗಳಲ್ಲಿ ರೂಢಿಯಲ್ಲಿ ಇರುವ ಅರ್ಥವೇ ಸರಿಯೆಂದು ತಿಳಿವು.
ಹಾಗೆ
ಬಾಲೆ + ಅನ್ನು = ಬಾಲನ್ನು ತಪ್ಪು ಎಂದು ತಿಳಿವು
"ಬಾಲನ್ನು = ಬಾಲು + ಅನ್ನು" ಎಂದೇ ರೂಢಿ.
ಆಗಮ ಸಂಧಿ
ಸಂಧಿಯಾಗುವಾಗ ಸ್ವರದ ಮುಂದೆ ಸ್ವರವು ಬಂದಾಗ,ಸಾಮಾನ್ಯವಾಗಿ ಹೊಸದಾಗಿ
ಒಂದು ವ್ಯಂಜನವು ಉತ್ತರಪದದ ಆದಿಯಲ್ಲಿರುವ ಸ್ವರಕ್ಕೆ ಬಂದು ಸೇರುತ್ತದೆ.ಇದರಲ್ಲಿ
ಎರಡು ವಿಧ.'ಯಕಾರಾಗಮ ಸಂಧಿ' ಹಾಗೂ 'ವಕಾರಾಗಮ ಸಂಧಿ'.
ಉದಾ:- ಮನೆ(ಎ)+ಅನ್ನು=ಮನೆಯನ್ನು.ಇಲ್ಲಿ ಉತ್ತರಪದದ ಆದಿಯಲ್ಲಿ 'ಯ್ ಕಾರ' 'ಆಗಮ'ವಾಗಿದೆ.
ಉದಾ:- ಮಗು(ಉ)+ಇಗೆ=ಮಗುವಿಗೆ.ಇಲ್ಲಿ ಉತ್ತರಪದದ ಆದಿಯಲ್ಲಿ 'ವ್ ಕಾರ' 'ಆಗಮ'ವಾಗಿದೆ.

ಕನ್ನಡದ ಹಲವಾರು ವ್ಯಾಕರಣದ ಹೊತ್ತಗೆಗಳು ಮೇಲಂತೆ ಹೇಳಿದರೂ, ಹೀಗೆ ಹೇಳುವದು ಹಲವು
ವಿವಾದಗಳಿಗೆ ಮತ್ತು ತಪ್ಪುತಿಳಿವಿಗೆ ಅನುವು ಮಾಡುವುದು.
ಈ ಸಂಧಿಯ ವಿವರಣೆಯಲ್ಲಿ ಇರುವಂತೆ "ಸಾಮಾನ್ಯವಾಗಿ ಹೊಸದಾಗಿ ಒಂದು ವ್ಯಂಜನವು
ಉತ್ತರಪದದ ಆದಿಯಲ್ಲಿರುವ ಸ್ವರಕ್ಕೆ ಬಂದು ಸೇರುತ್ತದೆ" ಎಂದಾಗ ಆ ಸಮಾನ್ಯವಲ್ಲದ( ಅಸಮಾನ್ಯ )
ಸನ್ನಿವೇಶಗಳು ಯಾವುವು ಎಂದು ಯಾವ ಹೊತ್ತಗೆಗಳು ಹೇಳುವುದಿಲ್ಲ.
ಮನೆ + ಅನ್ನು = ಮನೆಗಳನ್ನು ಏಕೆ ಆಗಬಾರದು? "ಗಳ್" ಯಾಕೆ ಆಗಮವಾಗಬಾರದು? ಹಾಗೆ...
ಮಗು + ಅನ್ನು = ಮಗುವನ್ನು ಆದರೆ ನೀರು + ಅನ್ನು = ನೀರುವನ್ನು ಏಕೆ ತಪ್ಪು?
ಮನೆ + ಅನ್ನು = ಮನೆಯನ್ನು ಆದರೆ ಆದರೆ + ಇಲ್ಲಿ = ಆದರೆಯಿಲ್ಲ ಏಕೆ ಆಗದೇ, ಆದರಿಲ್ಲಿ ಆಗುವುದು?
ಹೀಗೆ ಇನ್ನು ಹಲವು ವಿಚಾರಗಳಿಗೆ ಕಾರಣವನ್ನು ಕೊಡಲು ಆಗದು.
ಅದಕ್ಕೆ ಕೆಲವರು ಕನ್ನಡದಲ್ಲಿ "ಆಗಮಸಂಧಿ" ಎನ್ನವ ಸಂಧಿಯಿಲ್ಲ. ಕನ್ನಡದಲ್ಲಿ "ಲೋಪ ಸಂಧಿ" ಯೊಂದೆ ಸ್ವರ ಸಂಧಿ ಎನ್ನುವರು.
ಜತೆಗೆ ಅವರು "ಆಗಮಸಂಧಿ"ಗೆ ಉದಾಹರಣೆಯಾಗಿ ಹೇಳಿರುವ ಪದಗಳನ್ನು ಬಿಡಿಸಲು ಬೇರೆ ಬಗೆಯನ್ನು ಕೂಡ ಸೂಚಿಸಿರುವರು.
ಮೆನಯು + ಅನ್ನು = ಮೆನೆಯನ್ನು; ಉ ಕಾರ ಲೋಪ. "ಮನೆಯು => ಒಂದು ಮನೆ" ಮನೆಗಳು + ಅನ್ನು = ಮನೆಗಳನ್ನು :ಉ ಕಾರ ಲೋಪ; "ಮನೆಗಳು => ಹಲವು ಮನೆಗಳು"
ಮಗುವು + ಅನ್ನು = ಮಗುವನ್ನು; ಉ ಕಾರ ಲೋಪ
ಆದೇಶ ಸಂಧಿ
ಸಂಧಿಯಾಗುವಾಗ ಸ್ವರದ ಮುಂದೆ ಕ,ತ,ಪ ಗಳು ಬಂದಾಗ ,ಅದೇ ವರ್ಗದ ಮೂರನೇ
ವ್ಯಂಜನಗಳು ಅಂದರೆ ಗ,ದ,ಬ ಗಳು ಆದೇಶವಾಗಿ ಬರುತ್ತವೆ.
ಉದಾ:- ಮಳೆ+ಕಾಲ=ಮಳೆಗಾಲ., ಬೆಟ್ಟ+ತಾವರೆ=ಬೆಟ್ಟದಾವರೆ., ಅಡಿ+ಪವಳ=ಅಡಿಬವಳ.
ಗಮನಿಸಿರಿ: ಈ ನಿಯಮವು ಕನ್ನಡದಲ್ಲಿ ಬರುವ ಹಲವು ವ್ಯಂಜನದ ಆದೇಶಗಳನ್ನು ವಿವರಿಸುವುದಿಲ್ಲ.
ಅವನ್ನು ವಿವರಿಸಲು ಯಾವ ಸಂಧಿನಿಯಮವನ್ನು ಹಲವು ವ್ಯಾಕರಣದ ಹೊತ್ತಗೆಗಳು ಹೇಳುವುದಿಲ್ಲ.
ಮಾದರಿ:
ಹೆರ್‍ + ದಾರಿ = ಹೆದ್ದಾರಿ
ಬೆಲೆ + ಪೆಣ್ಣು(ಹೆಣ್ಣು) = ಬೆಲೆವೆಣ್ಣು
ಮುಂದು + ಪರಿ( ಹರಿ ) = ಮುಂದುವರಿ
ಮುಂದು + ಪರೆ( ಹರೆ ) = ಮುಂದುವರೆ
ತಣ್ + ನೀರು = ತಣ್ಣೀರು
ಕಣ್ + ನೀರು = ಕಣ್ಣೀರು
ಭೂ + ತಾಯಿ = ಭೂದಾಯಿ ಅಲ್ಲ ಏಕೆ?
ಒರ್‍ + ಕೊರಲು = ಒಕ್ಕೊರಲು
ಒರ್‍ + ಕೂಟ = ಒಕ್ಕೂಟ
ಒರ್‍ + ಕೂಡು = ಒಗ್ಗೂಡು
ಹೆರ್‍ + ಪಾವು(ಹಾವು) = ಹೆಬ್ಬಾವು
ಕಿಸು + ಪೊೞಲು(ಹೊಳಲು) = ಕಿಸುವೊಳಲು
ಮೂರ್‍ + ಕಣ್ಣ = ಮುಕ್ಕಣ
ತಣ್ + ಗಾಳಿ = ತಂಗಾಳಿ; ಇಲ್ಲಿ 'ಣ್' ಕಾರಕ್ಕೆ 'ಞ್' ಕಾರ ಆದೇಶ
ಗಮನಿಸಿರಿ: ಕನ್ನಡದಲ್ಲಿ ಹೆಚ್ಚ ಸರತಿ ಬರಿ ರೂಢಿಯಿಂದ ಸಂಧಿ/ಒರೆಗೂಡಿಕೆಗಳನ್ನು ಅರಿಯಲು
ಆರುವುದು. ಈ ಮೇಲಿನ ನಿಯಮಗಳಂತೆ ಎಲ್ಲ ಕನ್ನಡ ಸಂಧಿಪದಗಳನ್ನು ಬಿಡಿಸಲು ಆರದು.
ಸಂಸ್ಕೃತ ಸಂಧಿಗಳು
ಯಾವ ಕನ್ನಡದ ಪಲುಕು(ಪದ) ಈ ಕೆಳಗಿನ ಸಂಧಿಗಳಲ್ಲಿ ಬರುವುದಿಲ್ಲ. ಬರೀ ಸಂಸ್ಕೃತದ
ಪಲುಕುಗಳಿಗೆ ಸೀಮಿತವಾದ ಸಂಧಿಗಳಿವು. ಆದರೆ ಹಳೆಗನ್ನಡದಿಂದಲೂ ಕನ್ನಡದಲ್ಲಿ ಹೇರಳವಾಗಿ
ಬೆರೆತಿರುವ ಸಾವಿರಾರು ಸಂಸ್ಕೃತದ ಸಂಧಿಪದಗಳನ್ನು ತಿಳಿಯಲು ಈ ಸಂಧಿಗಳ ಅರಿವು ಬೇಕು.
ಈ ಸಂಧಿಗಳ ವಿವರಣೆಯನ್ನು ಸಂಸ್ಕೃತದ ವ್ಯಾಕರಣದ ಹೊತ್ತಗೆಗಳಿಂದ ಪಡೆಯಬಹುದು.
ಈ ಎಲ್ಲ ಸಂಧಿಗಳೂ ೧೦೦% ಸಂಸ್ಕೃತದ ವ್ಯಾಕರಣದ ಸಂಧಿನಿಯಮಗಳನ್ನೇ ಪಾಲಿಸುವುವು.
ಎರಡು ಸಂಸ್ಕೃತದ ಪದಗಳ ಸೇರಿಕೆ.
ಸವರ್ಣದೀರ್ಘ ಸಂಧಿ
ಗುಣ ಸಂಧಿ
ವೃದ್ಧಿ ಸಂಧಿ
ಯಣ್ ಸಂಧಿ
ಜಸ್ತ್ವ ಸಂಧಿ
ಶ್ಚುತ್ವ ಸಂಧಿ
ಷ್ಟುತ್ವ ಸಂಧಿ
ಅನುನಾಸಿಕ ಸಂಧಿ
ವಿಸರ್ಗ ಸಂಧಿ

ಸವರ್ಣದೀರ್ಘ ಸಂಧಿ

ಅ ಮತ್ತು ಆ, ಇ ಮತ್ತು ಈ, ಉ ಮತ್ತು ಊ - ಇವುಗಳಿಗೆ 'ಸವರ್ಣ'ಗಳೆಂದು ಹೆಸರು.
ಇವುಗಳಲ್ಲಿ ಆ,ಈ ಮತ್ತು ಊ ಸ್ವರಗಳು ದೀರ್ಘ ಸ್ವರಗಳು.
ಸಂಸ್ಕೃತ ಪದಗಳು ಸಂಧಿಯಾಗುವ ಸಂದರ್ಭದಲ್ಲಿ, ಸವರ್ಣ ಸ್ವರಗಳು ಒಂದರ
ಮುಂದೊಂದು ಬಂದಾಗ ಸಂಧಿ ಹೊಂದಿ, ಈ ಸವರ್ಣದ ದೀರ್ಘ ಸ್ವರವಾಗಿ ಉಳಿಯುತ್ತದೆ.
ಸಂಸ್ಕೃತದಲ್ಲಿ ಪಾಣಿನೀಯ ಸೂತ್ರ : 'ಅಕಃ ಸವರ್ಣೇ ದೀರ್ಘಃ' ಎಂದು.
ಉದಾಹರಣೆಗೆ:
ಅ + ಅ ಸ್ವರಗಳು ಸಂಧಿಯಾಗಿ 'ಆ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.ಇ + ಇ ಸ್ವರಗಳು ಸಂಧಿಯಾಗಿ 'ಈ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.ಉ + ಉ ಸ್ವರಗಳು ಸಂಧಿಯಾಗಿ 'ಊ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.
ಆ + ಅ ಸ್ವರಗಳು ಸಂಧಿಯಾಗಿ 'ಆ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.ಇ + ಈ ಸ್ವರಗಳು ಸಂಧಿಯಾಗಿ 'ಈ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.ಊ + ಉ ಸ್ವರಗಳು ಸಂಧಿಯಾಗಿ 'ಊ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.
ಕೃ ತ + ಅ ರ್ಥ = ಕೃ ತಾ ರ್ಥ
( ಅ + ಅ = ಆ )
ಶ ಚಿ + ಇಂ ದ್ರ = ಶ ಚೀಂ ದ್ರ ( ಇ + ಇ = ಈ )
ಬ ಹು + ಉ ದ ಕ = ಬ ಹೂ ದ ಕ ( ಉ + ಉ = ಊ )
ವಿ ದ್ಯಾ + ಅ ಭ್ಯಾ ಸ = ವಿ ದ್ಯಾ ಭ್ಯಾ ಸ ( ಆ + ಅ = ಆ )
ಸ ತೀ + ಈ ಶ = ಸ ತೀ ಶ ( ಈ + ಈ = ಈ )
ಉ ಪ + ಆ ಹಾ ರ = ಉ ಪಾ ಹಾ ರ ( ಅ + ಆ = ಆ )

ಗುಣ ಸಂಧಿ
ಗುಣ ಸಂಧಿ ಎಂಬ
ಸಂಸ್ಕೃತ ಸಂಧಿಯು ಪ್ರಮುಖವಾಗಿ ಮೂರು ಸಂದರ್ಭಗಳಲ್ಲಿ ಕಂಡು ಬರುತ್ತದೆ.
ಅ,ಆ + ಇ,ಈ ಸ್ವರಗಳು ಸಂಧಿಯಾಗಿ, 'ಏ' ಸ್ವರವಾಗಿ ಉಳಿಯುತ್ತದೆ.
ಅ,ಆ + ಉ,ಊ ಸ್ವರಗಳು ಸಂಧಿಯಾಗಿ, 'ಓ' ಸ್ವರವಾಗಿ ಉಳಿಯುತ್ತದೆ.
ಅ,ಆ + ಋ ಸ್ವರಗಳು ಸಂಧಿಯಾಗಿ, 'ಅರ್' ಎಂದು ಉಳಿಯುತ್ತದೆ.
ಉದಾಹರಣೆಗಳು:
ರಾ ಜ + ಇಂ ದ್ರ = ರಾ ಜೇಂ ದ್ರ ( ಅ + ಇ = ಏ )
ಜ ನ್ಮ + ಉ ತ್ಸ ವ = ಜ ನ್ಮೋ ತ್ಸ ವ ( ಅ + ಉ = ಓ )
ದೇ ವ + ಋ ಷಿ = ದೇ ವ ರ್ಷಿ ( ಅ + ಋ = ಅರ್)
ರ ಮಾ + ಈ ಶ = ರ ಮೇ ಶ ( ಆ + ಈ = ಏ )
ಮ ಹಾ + ಉ ತ್ಸ ವ = ಮ ಹೋ ತ್ಸ ವ ( ಆ + ಉ = ಓ )
ವೃದ್ಧಿ ಸಂಧಿ
ಅ ಆ ಕಾರಗಳಿಗೆ ಏ ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ 'ಐ' ಕಾರವೂ, ಓ ಔ ಕಾರಗಳು
ಪರವಾದರೆ ಅವೆರಡರ ಸ್ಥಾನದಲ್ಲಿ 'ಔ' ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿ ಸಂಧಿಯೆನ್ನುವರು.
ಉದಾಹರಣೆ:
ಲೋಕ + ಏಕವೀರ = ಲೋಕೈಕವೀರ
ಜನ + ಐಕ್ಯ = ಜನೈಕ್ಯ

ಯಣ್ ಸಂಧಿ
ಸಂಧಿ ರಚನೆಯಲ್ಲಿ 'ಯ' 'ರ' 'ಲ' 'ವ' ಈ ನಾಲ್ಕು ಅಕ್ಷರಗಳು ಆದೇಶವಾಗಿ ಬಂದರೆ ಯಣ್ ಸಂಧಿ ಎನ್ನುತ್ತೇವೆ.
ಮತ್ತು ಇ,ಈ,ಉ,ಊ,ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ ಈ ಕಾರಗಳಿಗೆ 'ಯ್'ಕಾರವೂ,
ಉ ಊಕಾರಗಳಿಗೆ 'ವ್'ಕಾರವೂ, ಋಕಾರಕ್ಕೆ 'ರ್'(ರೇಫ)ವೂ ಆದೇಶವಾಗಿ ಬರುತ್ತದೆ. ಇದಕ್ಕೆ 'ಯಣ್ ಸಂಧಿ'ಯೆನ್ನುತ್ತೇವೆ
ಉದಾಹರಣೆ:
ಅತಿ + ಅಂತ = ಅತ್ಯಂತ
ಮನು + ಅಂತರ = ಮನ್ವಂತರ
ಪಿತೃ + ಅರ್ಜಿತ = ಪಿತ್ರಾರ್ಜಿತ
ಅತಿ + ಅವಸರ = ಅತ್ಯವಸರ
ಜಾತಿ + ಅತೀತ = ಜಾತ್ಯಾತೀತ
ಕೂಟಿ + ಅಧೀಶ = ಕೋಟ್ಯಾಧೀಶ

ಜಸ್ತ್ವ ಸಂಧಿ
ವರ್ಗೀಯ
ವ್ಯಂಜನದ ಮೊದಲ ಅಕ್ಷರದ ಬದಲಿಗೆ ಮೂರನೆಯ ಅಕ್ಷರ ಬಂದಾಗ ಜಸ್ತ್ವ ಸಂಧಿ ಆಗುತ್ತದೆ.
ಪೂವ೯ಪದದ ಕೊನೆಯಲ್ಲಿರುವ ಪ್ರಥಮ ವಣ೯ಗಳಿಗೆ ಅಂದರೆ ಕ,ಚ,ಟ,ತ,ಪ ಗಳಿಗೆ ಇತರೆ ವಣ೯ಗಳು
ಪರವಾದರೆ ಅವುಗಳ ಸ್ತಾನದಲ್ಲಿ ಅದೇ ವಗ೯ದ ಮೂರನೆಯ ವಣ೯ವು ಆದೇಶವಾಗುತ್ತದೆ.
ಉದಾಹರಣೆ:
ವಾಕ್ + ಈಶ = ವಾಗೀಶ
ಜಗತ್ + ಗುರು = ಜಗದ್ಗುರು
ದಿಕ್ + ದೇಶ = ದಿಗ್ದೇಶ
ಸತ್ + ಉದ್ಯೋಗ = ಸದುದ್ಯೋಗ

ಶ್ಚುತ್ವ ಸಂಧಿ
'ಸ' ಕಾರ 'ತ' ವಗಾ೯ಕ್ಷರಗಳಿಗೆ 'ಶ' ಕಾರ 'ಚ' ವಗಾ೯ಕ್ಷರಗಳು ಪರವಾದಾಗ 'ಸ' ಕಾರಕ್ಕೆ 'ಶ' ಕಾರವೂ
'ತ' ವಗ೯ಕ್ಕೆ 'ಚ' ವಗ೯ವೂ ಆದೇಶವಾಗಿ ಬರುತ್ತದೆ.
ಉದಾ:-
ಮನಸ್+ಶುದ್ದಿ = ಮನಶ್ಯುದ್ದಿ
ಜಗತ್+ಜ್ಯೋತಿ = ಜಗಜ್ಯೋತಿ
ಸತ್ + ಜನ = ಸಜ್ಜನ

ಷ್ಟುತ್ವ ಸಂಧಿ
'ಷ್ಟು' ಎಂದರೆ 'ಷ' ಕಾರ 'ಟ' ವಗ೯ ಎಂದು ಸಂಙೆ ಪದಾಂತ್ಯದಲ್ಲಿರುವ 'ಸ' ಕಾರ 'ತ' ವಗ೯ಗಳಿಗೆ 'ಷ' ಕಾರ 'ಟ' ವಗ೯ಗಳು
ಪರವಾದರೆ 'ಸ' ಕಾರಕ್ಕೆ 'ಷ' ಕಾರವೂ 'ತ' ವಗ೯ಕ್ಕೆ 'ಟ' ವಗ೯ವೂ ಆದೇಶವಾಗುವುದು ಇದು ಷ್ಟುತ್ವ ಸಂಧಿ.
ಉದಾ:-
ತಪಸ್ + ಷಡಂಶ = ತಪಷ್ಪಡಂಶ
ತತ್ + ಟೀಕೆ = ತಟ್ಟೀಕೆ
ಅನುನಾಸಿಕ ಸಂಧಿ
ವರ್ಗೀಯ
ವ್ಯಂಜನದ ಮೊದಲ ಅಕ್ಷರದ ಬದಲಿಗೆ ಕೊನೆಯ ಅಕ್ಷರ (ಅನುನಾಸಿಕ) ಬಂದಾಗ ಅನುನಾಸಿಕ ಸಂಧಿ ಆಗುತ್ತದೆ.
ಉದಾಹರಣೆ:
ವಾಕ್ + ಮಯ = ವಾಙ್ಮಯ
ಜಗತ್ + ಮಾತಾ = ಜಗನ್ಮಾತಾ

ಜ್ನಾನಪೀಠ ಪ್ರಶಸ್ತಿ ಸ್ಥಾಪನೆ 1954
ಕೊಟ್ಟಿದ್ದು 1955
ಮೊಟ್ಟಮೊದಲ ಜ್ನಾನಪೀಠ ಪ್ರಶಸ್ತಿ ವಿಜೇತರು
ಶಂಕರ ಕುರುಪ್ ಭಾಷೆ ಮೆಲೆಯಾಳಂ
2010 ರಲ್ಲಿ 2007 ರ ಪ್ರಶಸ್ತಿ ಯನ್ನು ಶ್ರೀ ನೀಲಕಂಠ ಕುರುಪ ಕೊಂಕಣಿ ಮತ್ತು
2008 ರ ಅಖ್ಲರ್ ಖಾನ್ ಶೆರ್ಯ (ಉರ್ದು) ರವರಿಗೆ ನೀಡಲಾಯಿತು.
ಕನ್ನಡದಲ್ಲಿ ಜ್ನಾನಪೀಠ ಪ್ರಶಸ್ತಿ ವಿಜೇತರು 7 ಜನ (ಕುದ್ ಕಾ ಅಸ್ತಿ ವಿಕೃ UR ಗಿರೀಶ್) 196 7 3 7 3 0 4 8
ಕು ಕುವೆಂಪು (ಶ್ರೀ ರಾಮಾಯಣ ದರ್ಶನಂ) 1967
ದ್ ದ ರಾ ಬೇಂದ್ರೆ (ನಾಕು ತಂತಿ) 1973
ಕಾ ಶಿವರಾಂ ಕಾರಂತ(ಮೂಕಜ್ಜಿಯ ಕನಸುಗಳು) 1977
ಆಸ್ತಿ ಮಾಸ್ತಿ ವೆಂಕೇಶ ಅಯ್ಯಾಂಗಾರ್(ಚಿಕ್ಕವೀರ ರಾಜೇಂದ್ರ ಅಥವಾ ಸಮಗ್ರ ಸಾಹಿತ್ಯ) 1983
ವಿಕೃ ವಿನಾಯಕ ಕೃಷ್ಣ ಗೋಕಾಕ್(ಭಾರತ ಸಿಂದೂ ರಶ್ಮಿ ಅಥವಾ ಸಮಗ್ರ ಸಾಹಿತ್ಯ 1990
UR ಯು ಅರ್ ಅನಂತ ಮೂರ್ತಿ (ಸಮಗ್ರ ಸಾಹಿತ್ಯ) 1994
ಗಿರೀಶ್ ಗಿರೀಶ್ ಕಾರ್ನಾಡ್ (ಸಮಗ್ರ ಸಾಹಿತ್ಯ) 1998



21.03.2011
ವಿಸರ್ಗ ಸಂಧಿ
ಸಂಧಿ ಪದದಲ್ಲಿ ವಿಸರ್ಗ ಅಕ್ಷರವಾದ ಃ ಆದೇಶವಾಗಿ ಬಂದರೆ ಅದನ್ನು ವಿಸರ್ಗ ಸಂಧಿ ಅನ್ನುತಾರೆ
ಉದಾ: ಅಂತರ್+ಕರಣ=ಅಂತಃ ಕರಣ
ಅಂತರ್+ಪುರ=ಅಂತಃಪುರ
ಅಂತರ್+ಕಲಹ=ಅಂತಃಕಲಹ
ಟಿಪ್ಸ್:
ಮೊದಲನೇ ಮೈಸೂರ್ ಯುದ್ಧ 1767ರಿಂದ 69 ಕರ್ನಲ್ ಸ್ಮಿತ್ ಮದ್ರಾಸ್ ಒಪ್ಪಂದ
ಎರಡನೇ 1780 ರಿಂದ 84 ವಾರ್ನ್ ಹೇಸಿಟಿಂಗ್ಸ್ ಮಂಗಳೂರು ಒಪ್ಪಂದ
ಮೂರನೇಯ 1790 ರಿಂದ 92 ಕಾರ್ನವಾಲೀಸ್ ಶ್ರೀರಂಗಪಟ್ಟಣ ಒಪ್ಪಂದ
ನಾಲ್ಕನೇ 1799 ಶ್ರೀರಂಗಪಟ್ಟಣ ಒಪ್ಪಂದ

ಸಮಾಸಗಳು
ಬಿಡಿ ಬಿಡಿಯಾಗಿ ವಿಸ್ತರಿಸಿ ಹೇಳಬುಹುದಾದ ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ಅರ್ಥಬರುವಂತೆ ಸಿದ್ಧಗೊಂಡ
ಪದವೇ ಸಮಾಸ, ಇದು ಸಂಧಿತ ನಾಮಗಳಲ್ಲಿ ಬಹು ಪ್ರಧಾನವದುದ್ದು ಇದನ್ನು ಸಮಸ್ತ ಪದ, ಪಧ ವಿಧಿ,
ಕೂಡುನುಡಿ ಮತ್ತು ಸಮಾಸ ಅಂತಲೂ ಕರೆಯುತ್ತಾರೆ.
ಒಟ್ಟು ಕನ್ನಡದಲ್ಲಿ 8 ಪ್ರಕಾರಗಳಿದ್ದ್ದು ಅವುಗಳನ್ನು ಅರ್ಥದ ಮೊದಲ 4 ಈ ಕೆಳಗಿನಂತಿದೆ.
I ಉತ್ತರಪದ ಅರ್ಥ ಪ್ರಧಾನ ಪದ
1- ತತ್ಪುರುಷ ಸಮಾಸ
2 ಕರ್ಮಧಾರಯ ಸಮಾಸ
3 ದ್ವಿಗು ಸಮಾಸ
4ಕ್ರಿಯಾ ಸಮಾಸ
5ಗಮಕ ಸಮಾಸ
II. ಪೂರ್ವ ಪದ ಪ್ರಧಾನ ಸಮಾಸೆ
ಅಂಶಿಸಮಾಸ
II ಉಭಯ ಸರ್ವ ಪಧ ಪ್ರಧಾನ ಸಮಾಸ
ದ್ವಂದ್ವ ಸಮಾಸ
III ಅನ್ಯಪದ ಪ್ರಧಾನ ಸಮಾಸ
ಬಹುರ್ವೀಹಿ ಸಮಾಸ

I ಉತ್ತರ ಪದ ಪ್ರಧಾನ ಸಮಾಸ : ತತ್ಪುರುಷ ಸಮಾಸ
ಉದಾ: ಗುರುವಿನ+ಮನೆ+ಗುರುಮನೆ
ಹೊಟ್ಟೆಯಲ್ಲಿ+ಕಿಚ್ಛು=ಹೊಟ್ಟೆಕಿಚ್ಚು
ವಯಸ್ಸಿನ+ವೃದ್ಧ=ವಯೋವೃದ್ಧ
ಪೂರ್ವ ಪಧಗಳ ವಿಭಕ್ತಿ ಪ್ರತ್ಯೇಯಗಳ ಹಿನ್ನೆಲೆಯಲ್ಲಿ ಇದನ್ನು
5 ಪ್ರಕಾರವಾಗಿ ವಿಂಗಡಿಸಲಾಗಿದೆ
1 ತೃತೀಯ ತತ್ಪುರುಷ (ಇಂದ)
ಉದಾ: ಬಾಯಿಯಿಂದ + ಜಗಳ = ಬಾಯಿ ಜಗಳ (ಇಂದ ತೃತೀಯ ವಿಭಕ್ತಿ ಪ್ರತ್ಯಯ)
ಜ್ನಾನದಿಂದ+ವೃದ್ಧ=ಜ್ನಾನವೃಧ್ದ (ಇಂದ ತೃತೀಯ ವಿಭಕ್ತಿ ಪ್ರತ್ಯಯ)
ಕವಿಗಳಿಂದ+ವಂಧಿತ=ಕವಿವಂಧಿತ (ಇಂದ ತೃತೀಯ ವಿಭಕ್ತಿ ಪ್ರತ್ಯಯ)
2 ಚತುರ್ಥಿ ತತ್ಪುರುಷ ( ಗೆ)
ಉದಾ: ಕೃಷ್ಣನಿಗೆ+ಅರ್ಪಣಾ=ಕೃಷ್ಣಾರ್ಪಣಾ
ಭೂತಗಳಿಗೆ + ಬಲಿ=ಭೂತಬಲಿ
ಕೂದಲಿಗೆ+ಎಣ್ಣೆ=ಕೂದಲೆಣ್ಣೆ
3 ಪಂಚಮಿ ತತ್ಪುರುಷ (ದೆಸಿಯಿಂದ)
ಉದಾ: ರೋಗದ ದೆಸೆಯಿಂದ+ಮುಕ್ತಿ=ರೋಗಮುಕ್ತಿ
ದೇಶದ ದೆಸೆಯಿಂದ+ಅಂತರ=ದೆಶಾಂತರ
4 ಷಷ್ಠಿ ತತ್ಪುರುಷ ( ಅ)
ಉದಾ: ಆನೆಯ+ಮರಿ=ಆನೆಮರಿ
ಕಲ್ಲಿನ+ಮಂಟಪ=ಕಲ್ಲುಮಂಟಪ (IMP)
ಮಲ್ಲರ+ಕಾಳಗ=ಮಲ್ಲಕಾಳಗ
ದೇವರ+ಮಂದಿರ =ದೇವಮಂದಿರ
ಗುರುವಿನ+ಮನೆ=ಗುರುಮನೆ
5 ಸಪ್ತವಿ ತತ್ಪುರುಷ: (ಅಲ್ಲಿ)
ಸರ್ವರಲ್ಲಿ+ಉತ್ತಮ=ಸರ್ವೋತ್ತಮ
ಗೃಹದಲ್ಲಿ+ಪ್ರವೇಶ=ಗೃಹಪ್ರವೇಶ
ಹೊಟ್ಟೆಯಲ್ಲಿ+ಕಿಚ್ಚು=ಹೊಟ್ಟೆಕಿಚ್ಚು
ಗ್ರಾಮದಲ್ಲಿ+ವಾಸ=ಗ್ರಾಮವಾಸ
ತಲೆಯಲ್ಲಿ+ನೋವು=ತಲೆನೋವು
ಕರ್ಮಧಾರಯ ಸಮಾಸ:
ಪೂರ್ವ ಪದದ ಗುಣವಾಚಕ ಮತ್ತು ಉತ್ತರಪದ ಪ್ರಧಾನ ಸಮಾಸ
ಉದಾ; ಹಿರಿದಾದ+ಮರ= ಹೆಮ್ಮರ
ಹಿರಿದಾದ+ಮಾರಿ+ಹೆಮ್ಮಾರಿ
ನಿಡಿದಾದ+ಉಸಿರು+ನಿಟ್ಟುಸಿರು
ಕೆಂಪಾದ+ತುಟಿ=ಕೆಂದುಟಿ
ಕೆಂಪಾದ+ತಾವರೆ=ಕೆಂದಾವರೆ
ಪೀತವಾದ+ಅಂಬರ=ಪೀತಾಂಬರ
ನಿಯಮ I ಪೂರ್ವೋತ್ತರಗಳೆರಡು ವಿಶೇಶ ಮತ್ತು ವಿಶೇಷಣಗಳಿಂದ ಕೂಡಿ ಸಮಾಸವಾಗುವುದು
ಉದಾ: ಕೆಂಪಾದ+ತಾವರೆ=ಕೆಂದಾವರೆ
ತಂಪಾದ+ಗಾಳಿ=ತಂಗಾಳಿ
ತಂಪಾದ+ಎಲರು=ತಂಬೆಲರು
ತಂಪಾದ + ಕದಿರು=ತಂಗದಿರು
ನಿಯಮ II : ಪೂರ್ವೋತ್ತರಗಳು ಉಪಮಾನ ಉಪಮೇಯ ಅಥವಾ ಉಪಮೇಯ ಉಪಮಾನವಾಗಿರುವುದು
ಉದಾ: ಎಲೆಯಂತೆ + ಹಸಿರು=ಎಲೆಹಸಿರು
ಗಿಳಿಯಂತೆ + ಹಸಿರು= ಗಿಳಿಯಸಿರು
ಕ್ಷೀರದಂತೆ+ಸಾಗರ=ಕ್ಷೀರಸಾಗರ
ಹಾಲಿನಂತೆ + ಕಡಲು=ಹಾಲ್ಗಡಲು
ಚರಣಗಳು+ಕಮಲ=ಚರಣಕಮಲ
ಅಡಿಗಳು+ತಾವರ= ಅಡಿದಾವರೆ
ನಿಯಮ-III ಪೂರ್ವೋತ್ತರ ಪದಗಳೆರದು ವಿಶೇಷಣಗಳಾಗಿದ್ದರೆ
ಉದಾ ಶೀತವೂ+ಉಷ್ಣವೂ=ಶೀತೋಷ್ಣವೂ
ಹುಳಿಯ+ಮಧುರ=ಹುಳಿಮಧುರ
ಹಿರಿದು+ಕಿರಿದು=ಹಿರಿಕಿರಿದು
ನಿಯಮ-IV: ಪೂರ್ವ ಪದವೂ "ಏ" ಅಕ್ಷರದಿಂದ ಕೂಡಿರುವುದು
ಉದಾ: ಫಲವೇ+ಆಹಾರ=ಫಲಹಾರ
ಸುಃಖವೇ+ಜೀವನ=ಸುಃಖಜೀವನ
ಕೋಪವೇ+ಅನಲು=ಕಾನಲ
ವಿದ್ಯೆಯೇ+ಅರ್ಥಿ=ವಿಧ್ಯಾರ್ಥಿ
ಶಾಂತಿಯೇ+ಸಾಗರ=ಶಾಂತಿಸಾಗರ ( ಫೆಸಿಫಿಕ್ ಸಾಗರ)
ಮನವೇ+ಮರ್ಕಟ=ಮನೋಮರ್ಕಟ
ದ್ವಿಗು ಸಮಾಸ
ಪೂರ್ವ ಪದ ಸಂಖ್ಯಾಸೂಚಕ ಮತ್ತು ಉತ್ತರ ಪದ ನಾಮಪದ ವಾಗಿರುವುದು
ಉದಾ: ಎರಡು+ಮುಡಿ=ಇರ್ಮುಡಿ
ಮೂರು+ಕಣ್ಣ=ಮುಕ್ಕಣ್ಣ
ನಾಲ್ಕು+ಮಡಿ=ನಾಲ್ವಡಿ
ಎರಡು + ಕೆಲ =ಇಕ್ಕೆಲ
ಎರಡು+ಬದಿ=ಇಬ್ಬದಿ
ಮೂರು+ಬಟ್ಟೆ=ಮೂವಟ್ಟೆ
ಎರಡು + ತಂಡ=ಇತ್ತಂಡ
ನೂರೊ+ಮಡಿ=ನೂರ್ಮಡಿ
ದಶ+ಅವತಾರ=ದಶಾವತಾರ
ದಶ+ಆನನ= ದಶಾನನಾ
ಪಂಚ+ಇಂದ್ರೀಯ=ಪಂಚೇಂದ್ರಿಯಾ
ಮೂರು+ಗಾವುರ=ಮುರಾವುರ
ಐದು+ಮುಡಿ=ಐವಡಿ
ಅಂಶೀ ಸಮಾಸ: ಅಥವಾ ಅವ್ಯಯ ಸಮಾಸ
ಪೂರ್ವ ಪದವೂ ಸಮಸ್ತ(ಪೂರ್ಣ)ವಸ್ತುವನ್ನು ಮತ್ತು ಉತ್ತರ ಪದ ಅದರ ಭಾಗವನ್ನು ಸೂಚಿಸಿವುದು
ಉದಾ: ತಲೆಯ+ಮುಂದೆ=ಮುಂದಲೆ
ಮೆದುಳು+ಮುಂದೆ=ಮುಮೆದುಳು
ಕಾಲು+ಮುಂದೆ=ಮುಂಗಾಲು
ಬೆಟ್ಟದ+ತುದಿ=ತುದಿಬೆಟ್ಟ
ಪೂರ್ವೋತ್ತರ ಪದಗಲ ಸ್ಥಾನಪಲ್ಲಟಗೊಳ್ಳವುದು
ಉದಾ: ಮೂಗಿನ+ತುದಿ=ತುದಿಮೂಗು
ಕೈ+ಅಡಿ+ಅಂಗೈ
ಕಾಲಿನ+ಅಡಿ=ಅಡಿಗಾಲು
ರಾತ್ರಿಯ+ಮದ್ಯೆ=ಮದ್ಯರಾತ್ರಿ
ಕಣ್ಣಿನ+ಕಡೆಗೆ=ಕಡೆಗಣ್ಣು
ದ್ವಂದ್ವ ಸಮಾಸ : ಎಲ್ಲಾ ಪದಗಳ ಅರ್ಥವೂ ಪ್ರಧಾನವಾಗಿರುವುದು
ಉದಾ: ರಾಮ+ಲಕ್ಷ್ಮಣ +ಸೀತೆ=ರಾಮಲಕ್ಷ್ಮಣಸೀತೆಯರು
ಕೆರೆಯೂ+ಬಾವಿಯೂ+ಕಟ್ಟೆಯೂ=ಕೆರೆಬಾವಿಕಟ್ಟೆಗಳು
ಕೃಷ್ಣನು+ಅರ್ಜುನನು=ಕೃಷ್ಣಾರ್ಜುನರು
ತಂದೆಯೂ+ತಾಯಿಯರು= ತಂದೆ ತಾಯಿಯರು
ಧನವೂ+ಧಾನ್ಯವೂ=ಧನಧಾನ್ಯವೂ
ನಕುಲರು+ಸಹದೇವರು=ನಕುಲಸಹದೇವರು
ಬಹುರ್ವೀಹಿ ಸಮಾಸ: ಅನ್ಯಪ್ರಧಾನಾರ್ಥ ಕೊಡುವ ಸಮಾಸ
ಉದಾ: ಮೂರು+ಕಣ್ಣುಳ್ಳವನೂ ಯಾವನೋ=ಮುಕ್ಕಣ್ಣ (ಶಿವ)
ಹಣೆಯಲ್ಲಿ+ಕಣ್ಣುಳ್ಳವನೂ ಯಾವನೋ=ಹಣೆಗಣ್ಣ(ಶಿವ)
ನಿಡಿದಾದ+ಮೂಗುಳ್ಳವಳು=ನಿಡಿಮೂಗು
ಕಡಿದು+ಚಾಗವುಳ್ಳವುನು=ಕಡುಚಾಗಿ(ಕರ್ಣ)
ಛಲವೂ+ಅಧಿಯಲ್ಲಿ=ಛಲವಾಧಿಯಲ್ಲಿ(ದುರ್ಯೋಧನ)
ಅರ್ಧ+ಅಂಗವುಳ್ಳವಳು=ಅರ್ದಾಂಗಿ
ನಾಲ್ಕು+ಮುಖವುಳ್ಳವನು=ನಾಲ್ಮುಗ(ಬ್ರಹ್ಮ)
ಕ್ರಿಯಾ ಸಮಾಸ :ಪೂರ್ವ ಪದವೂ ದಾತುವನ್ನು (ಯಾವುದೆ ವಿಭಕ್ತಿ ಪ್ರತೇಯವನ್ನು)
ಉತ್ತರ ಪದವೂ ಕ್ರಿಯೆಯನ್ನು ಸೂಚಿಸುವುದು
ಉದಾ; ವಿಷವನ್ನು+ಕಾರು=ವಿಷಕಾರು
ಕೈಯನ್ನು+ಮುಗಿ=ಕೈಮುಗಿ
ಬಿಲ್ಲನ್ನು+ಎತ್ತು=ಬಿಲ್ಲೆತ್ತು
ತಲೆಯನ್ನು+ಕೆಡವು=ತಲೆಗೆಡುವು
ನೀರಿನಿಂದ ಕೂಡೂ+ನೀರ್ಗೂಡು
ತಪದಲ್ಲಿ+ಇರು=ತಪವಿರು
ಗಮಕ ಸಮಾಸ ಅಥವಾ ಕರ್ಮಧಾರಯ ಸಮಾಸದ ಪ್ರಬೇದ ಅಥವಾ ಪ್ರಕಾರ
ಕೇಶಿರಾಜನ ಪ್ರಕಾರ ಇದು ಕನ್ನಡದ ಒಂದು ಅಸಾದರಣ ಲಕ್ಷಣಗಳ್ಳಿ ಒಂದು
ಉದಾ: ಅವನು+ಹುಡುಗ=ಆ ಹುಡುಗ
ಅವಳು + ಹುಡುಗಿ= ಅ ಹುಡುಗಿ
ಅದು+ಮರ=ಆ ಮರ
ಇದು + ಮರ = ಈ ಮರ
ಇದು + ಶಾಲೆ = ಈ ಶಾಲೆ

ಕ್ರಿಯಾ ಪದ
ವಾಕ್ಯದಲ್ಲಿ ಕತೃವಿನ ಕ್ರಿಯೆಯನ್ನು ಸೂಚಿಸುವ ಪದವನ್ನು ಕ್ರಿಯಾ ಅದ ಎನ್ನುತ್ತಾರೆ
ಈ ಕ್ರಿಯಾ ಪದವೂ ಮೂಲರೂಪವನ್ನು ಧಾತು
ಅಥವಾ ಕ್ರಿಯಾ ಪ್ರಕೃತಿ ಎನ್ನುತ್ತೇವೆ.
ಉದಾ: ತಿನ್ನು, ಬರೆ, ಹಾಡು, ನೋಡು, ನೀಡು ಇತ್ಯಾದಿ
ಕ್ರಿಯೆಯೂ ಕೆಲೆವೂ ಪ್ರತ್ಯೇಯಗಳನ್ನು ಪಡೆಯುವದರ ಮೂಲಕ ಕ್ರಿಯಾ
ಪದವಾಗಿ ಸಿದ್ಧಗೊಳ್ಳುತ್ತದೆ.
ಉದಾ: ಹೋಗುತ್ತಾನೆ, ತಿನ್ನುತ್ತಾನೆ, ಬರೆದನು, ನೀಡುತ್ತೇನೆ,
ಹಾಡುತ್ತೇನೆ, ನಗುತ್ತೇನೆ ಇತ್ಯಾದಿ.
ಕ್ರಿಯಾ ಪ್ರಕೃತಿ ಅಥವಾ ಧಾತುಗಳಲ್ಲಿ ಎರಡು (2) ಪ್ರಕಾರಗಳು
1. ಸಹಜ ಧಾತು 2 ಸಾಧಿತ ಧಾತು
1. ಸಹಜ ಧಾತು : ಕ್ರಿಯಾ ಪದವೂ ಮೂಲದಿಂದಲೂ ಸಹಜವಾಗಿ
ಬಳಕೆಗೊಳ್ಳುವುದು
ಉದಾ: ತಿನ್ನು, ಬರೆ, ಹಾಡು, ನೋಡು, ನೀಡು ಇತ್ಯಾದಿ
2. ಸಾಧಿತ ಧಾತು: ನಾಮ ಪ್ರಕೃತಿಯು ಪ್ರತ್ಯೇಯವನ್ನು ಪಡೆಯುವುದು.
ಪ್ರೇರಣಾರ್ಥದಲ್ಲಿ ಇನ್ನೊಂದು ಧಾತುವಾಗಿ ಸಿದ್ಧಗೊಳ್ಳುವುದು
ಅಥವಾ ಅನುಕರಣ ವ್ಯಯಗಳ ("ಇಸು" ಪ್ರಧಾನ) ಪ್ರತ್ಯೇಯವನ್ನು ಪ
ಡೆದು ಸಿದ್ಧಗೊಳ್ಳುವುದೇ ಸಾಧಿತ ಧಾತು
ಉದಾ: ಭಾವ+ ಇಸು=ಭಾವಿಸು
ಕನ್ನಡ + ಇಸು= ಕನ್ನಡಿಸು
ತರ್ಕ+ಇಸು=ತರ್ಕಿಸು
ಪ್ರೀತಿ+ಇಸು=ಪ್ರೀತಿಸು
ಸಾಧನೆ+ಇಸು=ಸಾಧಿಸು
ರಕ್ಷ+ಇಸು= ರಕ್ಷಿಸು
ಕುಣಿ+ಇಸು=ಕುಣಿಸು
ತಿನ್ನು+ಇಸು=ತಿನ್ನಿಸು
ಬರೆ+ಇಸು+ಬರೆಯಿಸು
ಅನುಕರಣ
ಉದಾ: ಥಳಥಳ+ಇಸು = ಥಳಥಳಿಸು
ಗುಡುಗು+ಇಸು=ಗುಡುಗಿಸು
ಕ್ರಿಯಾ ರೂಪಗಳು
ಒಂದು ಕ್ರಿಯಾ ಪದವೂ ರೂಪದಲ್ಲಿ ಎಂಬ ಆಧಾರದಲ್ಲಿ
2 ಪ್ರಕಾರವಾಗಿ ವಿಂಗಡಿಸಲಾಗಿದೆ
1. ಕಾಲರೂಪ ಕ್ರಿಯಾ ಪದ: 2. ಅರ್ಥ ರೂಪ ಕ್ರಿಯಾ ಪದ
1. ಕಾಲರೂಪ ಕ್ರಿಯಾ ಪದ: ಇದರಲ್ಲಿ 3 ಅಂಶಗಳನ್ನು ಪ್ರಕಟ ಪಡಿಸುತ್ತದೆ.
1. ಕ್ರಿಯೆಯ ಬಗ್ಗೆ 2 ಕ್ರಿಯೆ ನಡೆದ ಕಾಲದ ಬಗ್ಗೆ ಮತ್ತು. 3.ಕ್ರಿಯೆಗೆ
ಸಂಬಂದಿಸಿದ ಕತೃವಿನ ಲಿಂಗ, ವಚನ, ಸರ್ವ ನಾಮಗಳ ಬಗ್ಗೆ
ಮೇಲಿನ ಮೂರು ಅಂಶಗಳು ವ್ಯಾಕರಣದ ನಿಯಮದಂತೆಯೇ ಸೇರುತ್ತವೆ:
ಉದಾ: ಬರೆ+ಉತ್ತ್+ಏನೆ=ಬರೆಯುತ್ತೇನೆ
ಬರೆ+ಉತ್ತ್+ಆಳೆ=ಬರೆಯುತ್ತಾಳೆ
ಕಾಲ ಸೂಚಕ ಪ್ರತ್ಯೇಯಗಳು : ಕ್ರಿಯೇ ನಡೆದ ಕಾಲವನ್ನು ಸೂಚಿಸುವ ಪ್ರತ್ಯೇಯ
ಕನ್ನಡದಲ್ಲಿ ಮೂರು ಪ್ರಕಾರಗಳಿವೆ
ಹೊಸಗನ್ನಡ ಹಳಗನ್ನಡ
ವರ್ತಮಾನ ಕಾಲ ಉತ್ತ ದಪ
ಭೂತಕಾಲ ದ ದ
ಭವಿಷ್ಯತ್ ಕಾಲ ಉವ/ವ ವ
ಪುರುಷ
ವರ್ತಮಾನ ಕಾಲ
ಭೂತ ಕಾಲ
ಭವಿಷ್ಯತ್ಕಾಲ
ಏಕ ವಚನ
ಬಹು ವಚನ
ಏಕ ವಚನ
ಬಹು ವಚನ
ಏಕವಚನ
ಬಹು ವಚನ
ಉತ್ತಮ
ಏನೆ
ಏವೆ
ಏನು
ಏ ಉ
ಎನ್ನು
ಎ ವು
ಬರೆಯುತ್ತೇನೆ
ಬರೆಯುತ್ತೇವೆ
ಬರೆದನು
ಬರೆದೆವು
ಬರೆವನು
ಬರೆಯುವೆವು
ಮಧ್ಯಮ
ಇ ಯ
ಇರಿ

ಇರಿ

ಇರಿ
ಬರೆಯುತ್ತೀಯ
ಬರೆಯುತ್ತಿರಿ
ಬರೆದೆ
ಬರೆದಿರಿ
ಬರೆಯೆ
ಬರೆಯುವಿರಿ
ಪ್ರಥಮ

ಪುಲ್ಲಿಂಗ
ಆನೆ
ಅರೆ
ಅವು
ಅರು
ಅನು
ಅದು
ಬರೆವನು
ಬರಿಯಿರು
ಬರೆವನು
ಬರೆವುದು
ಬರೆವನು
ಬರೆಯನು
ಸ್ತ್ರೀ ಲಿಂಗ
ಅಳೆ
ಅರೆ
ಅಳು
ಅದು
ಅಳು
ಅರು
ಬರೆಯಳು
ಬರೆಯರು
ಬರೆಯಳು
ಬರೆಯದು
ಬರೆಯಳು
ಬರೆವರು
ನಪುಂಸಕ ಲಿಂಗ
ಅದೆ
ಅವೆ
ಇತು
ಅವು
ಅದು
ಅವು


ನಿಯಮ-1. ಕೆಲವೂ :ಉ:ಕಾರಾಂತ ಧಾತುಗಳು ಭೂತಕಾಲದಲ್ಲಿ "ಇ"ಕಾರಾಂತ ವಾಗಿ
ಮಾರ್ಪಟ್ಟು ಕಾಲವಾಚ ಪ್ರತ್ಯೇಯ ಮತ್ತು ಅಖ್ಯಾತ
ಪ್ರತೇಯವನ್ನು ಪಡೆಯುತ್ತವೆ.
ನಿಯಮ-2. ಕೆಲವು ಧಾತುಗಳು ಭೂತಕಾಲದಲ್ಲಿ ವಿಕಾರಗೊಳ್ಳುತ್ತವೆ
ಉದಾ: ನಗು----ನಕ್ಕ
ತಿನ್ನು---ತಿಂದ
ಕೆಡು---ಕೆಟ್ಟ
ಪಡು--ಪಟ್ಟ
ನಿಯಮ 3. ಭೂತಕಾಲದ ನಪುಂಸಕ ಲಿಂಗ ಏಕವಚನದಲ್ಲಿ ಧಾತು ನೇರವಾಗಿ ಅಖ್ಯಾತ
ಪ್ರತ್ಯೇಯವಾಗಿ ಪಡೆಯುತ್ತದೆ.
ಉದಾ: ಮಾಡಿತ್ತು---ಮಾಡು
ನೋದಿತ್ತು---ನೋಡು
ಅರ್ಥ ರೂಪ ಕ್ರಿಯಾ ಪದ
ಕ್ರಿಯಾ ಪದವೂ ಕಾಲರೂಪವನ್ನಲ್ಲದೆ ಅರ್ಥ ರೂಪವನ್ನು ಹೊಂದುತ್ತದೆ.
ಇಲ್ಲಿ ಕ್ರಿಯಾ ಪದದ ಅರ್ಥವೆ ಪ್ರಧಾನವಾಗಿರುತ್ತದೆ.
ಮತ್ತು ಇದು ಆಜ್ನೆ, ಆರೈಕೆ, ಕೋರಿಕೆ, ನಿಷೇಧ, ಸಂಭವ ಇತ್ಯಾದಿ ಅರ್ಥಗಳನ್ನು
ತಿಳಿಸಲು ಬಳಕೆಯಾಗುತ್ತದೆ. ಮತ್ತು ಧಾತುಗೆ
ನೇರವಾಗಿ ಅಖ್ಯಾತ ಪ್ರತ್ಯೇಯ ಬಂದು ಸೇರುತ್ತದೆ. ಇದರಲ್ಲಿ 3 ಪ್ರಕಾರಗಳು
ವಿಧಿ/ವಿಧ್ಯಾರ್ಥ ರೂಪ:ಆಜ್ನೆ, ಅರೈಕೆ, ಅಪ್ಪಣೆ, ವಿಜ್ನಾಪನೆ ಅಥವಾ
ಅಶೀರ್ವಾದ ಈ ಅರ್ಥಗಳನ್ನು ಹೇಳಿವ ಕ್ರಿಯಾ ಪದ
ನಿಷೇಧಾರ್ಥಕ: ಕ್ರಿಯೇ ನಡೆಯಲಿಲ್ಲ/ ನಡೆಯುವುದಿಲ್ಲ/ ಎಂಬ
ಅರ್ಥವನ್ನು ಕೊಡುವುದು
ಸಂಭವಾರ್ಥ ರೂಪ ಕ್ರಿಯಾಪದ : ಕ್ರಿಯೆ ನಡೆಯುವದರಲ್ಲಿ ಸಂಶಯ
ಇರುವಾಗ ನಡೆಯಬೇಕೆಂದು ಊಹಿಸಿವುದಕ್ಕೆ
ಸಂಭವಾರ್ಥ ಎನ್ನುತ್ತೇವೆ.
ಪುರುಷ
ವಿಧಿ ರೂಪ
ನಿಷೇದಾರ್ಥ
ಸಂಭವಾರ್ಥ
ಏಕ ವಚನ
ಬಹು ವಚನ
ಏಕ ವಚನ
ಬಹು ವಚನ
ಏಕ ವಚನ
ಬಹು ವಚನ
ಉತ್ತಮ

ಕೊಲ್ಲುವೆ
ಓ ಣ
ಕೊಲ್ಲೋಣ
ಏನು
ಬರೆಯನು
ಏವು
ಬರೆಯುವೆ
ಏನು
ನಕ್ಕೆನು

ಏವು
ನಕ್ಕೆವು


ಮಧ್ಯಮ

ಕೊಲ್ಲು
ಇರಿ
ಕೊಲ್ಲಿರಿ

ಬರೆಯೆ
ಅರಿ
ಬರೆಯಿರು
ಈಯ
ನಕ್ಕೀಯಾ
ಇರಿ
ನಕ್ಕಿರಿ
ಪ್ರಥಮ






ಪುಲ್ಲಿಂಗ
ಅಲ್ಲಿ
ಕೊಲ್ಲಲಿ
ಅರಿ
ಕೊಲ್ಲಿರಿ
ಅನು
ಬರೆಯನು
ಅರು
ಬರೆಯದು
ಅನು
ನಕ್ಕಾನು
ಅರು
ನಕ್ಕಾರು
ಸ್ತ್ರೀ ಲಿಂಗ






ನ. ಲಿಂಗ







ಪ್ರಸ್ತಾರ ಹಾಕುವುದು
ಹ್ರಸ್ವಸ್ವರ ಮತ್ತು ಹ್ರಸ್ವಸ್ವರದಿಂದ ಕೂಡಿದ ಅಕ್ಷರ : ಲಘು (U) ಎಂದು
ಪರಿಗಣಿಸಬೇಕು
ದೀರ್ಘಸ್ವರ, ದೀರ್ಘಸ್ವರದಿಂದ ಕೂಡಿದ, ಒತ್ತಕ್ಷರದ ಹಿಂದಿನ, ಅನುಸ್ವಾರ ಮತ್ತು
ವಿಸರ್ಗ ಅಕ್ಷರಗಳನ್ನು ಗುರು (-) ಎಂದು ಪರಿಗಣಿಸಬೇಕು
"ಗುರು" ವಾಗಲು ಹಲವಾರು ಕಾರಣಗಳಿದ್ದರು ಅದನ್ನು ಒಂದೆ ಗುರುವೆಂದು ಪರಿಗಣಿಸಬೇಕು
ಉದಾ: ಕಾಂಗ್ರೇಸ್ ಕಾಂ(-) ಗ್ರೇ( U ) ಸ್ ( U )

25.03.2011
ಅವ್ಯಯಗಳು :(ಬದಲಾಗದೆ ಇರುವುದು)
ನಾಮ ಪ್ರಕೃತಿ ಮತ್ತು ಧಾತು ಅಥವಾ ಕ್ರಿಯಾ ಪ್ರಕೃತಿಗಳು ಪ್ರತ್ಯೇಗಳನ್ನು
ಪಡೆಯುವದರ ಮೂಲಕ ತನ್ನ ರೂಮಪವನ್ನು ಬದಲಿಸಿಕೊಳ್ಳುತ್ತವೆ
ಹೀಗೆ ನಾಮ ಪ್ರಕೃತಿ ಮತ್ತು ಕ್ರಿಯಾ ಪ್ರಕೃತಿಗಳಂತೆ ಲಿಂಗ, ವಚನ,
ಕಾಲಕ್ಕನುಗುಣವಾಗಿ ಯಾವ ರೂಪ ಭಾವ ಹೊಂದದೆ ಏಕರೂಪವಾಗಿರುವ ಶಬ್ದಗಳನ್ನು
ಅವ್ಯಗಳನ್ನುತ್ತಾರೆ
ಪ್ರಕಾರಗಳು
1. ಸಾಮಾನ್ಯ ಅವ್ಯಗಳು
2. ಅನುಕರಣ ಅವ್ಯಗಳು
3. ಕ್ರಿಯಾರ್ಥ ಅವ್ಯಗಳು
4. ಭಾವ ಸೂಚಕ ಅವ್ಯಗಳು
5. ಸಂಬಂಧ ಸೂಚಕ ಅವ್ಯಯಗಳು
6. ಅವಧಾರಣಾರ್ಥಕ
7. ಕೃದ್ಧಾಂತ ಅವ್ಯಯ
8. ತದ್ಧಿತಾಂತ ಅವ್ಯಗಳು
1.ಸಾಮಾನ್ಯ ಅವ್ಯಗಳು :
ಯಾವುದಾದರೊಂದು ಕ್ರಿಯೆ ನಡೆದ ರೀತಿಯನ್ನು ಹೇಳುವಂತೆ ಅವ್ಯಗಳಿಗೆ
ಸಾಮಾನ್ಯ ಅವ್ಯಗಳೆನ್ನುತ್ತಾರೆ ಇವು ಕ್ರಿಯಾ ವಿಶೇಷಣಗಾಳಿರುತ್ತವೆ.
ಉದಾ: ಸುಮ್ಮನೆ, ಬೇಗನೆ, ತಟ್ಟನೆ, ಚೆನ್ನಾಗಿ, ನೆಟ್ಟಗೆ ಇತ್ಯಾದಿ.
2. ಅನುಕರಣ ಅವ್ಯಗಳು
ಅರ್ಥವಿಲ್ಲದ ದ್ವನಿ ವಿಶೇಷಣಗಳನ್ನು ತಾನು ಹೇಳಿದಂತೆ ಮತ್ತೆ ಮತ್ತೆ
ಅನುಕರಿಸಿ ಹೇಳುವುದನ್ನು ಅನುಕರಣ ಅವ್ಯಗಳನ್ನುತ್ತೇವೆ.
ಉದಾ: ರಪ ರಪ, ಗುಡುಗುಡು, ಸರ ಸರ, ಚುರು ಚುರು, ಘಮ ಘಮ ಗಳಗಳ ಇತ್ಯಾದಿ
3.ಕ್ರಿಯಾರ್ಥಕ ಅವ್ಯಗಳು
ಉದಾ: ಹೌದು ಹೌದು, ಇಲ್ಲ ಇಲ್ಲ, ಬೇಡ ಬೇಡ, ಸಾಕುಸಾಕು ಇತ್ಯಾದಿ
4. ಭಾವಸೂಚಕ ಅವ್ಯಗಳು:
ಮನಸ್ಸಿನಲ್ಲಿ ಉಂಟಾಗುವ ಭಿನ್ನ ಬಗೆಯ ಭಾವಗಳಾದ ಹರ್ಷ, ಸಂಭ್ರಮ, ಗಾಬರಿ,
ತಿರಸ್ಕಾರ, ತೊಂದರೆ ಇಂತಹ ಭಾವನೆಗಳನ್ನು ಅಭಿವ್ಯಕ್ತಿಸುವಾಗ
ಕೆಲವು ಅರ್ಥವಿಲ್ಲದ ಪದಗಳನ್ನು ಉಪಯೋಗಿಸುತ್ತೇವೆ ಇವುಗಳಿಗೆ ಭಾವಸೂಚಕ
ಅವ್ಯಗಳನ್ನುತ್ತೇವೆ.
ಉದಾ: ಅಹಾ!. ಅಭ್ಬಾ!, ಛೇ!. ಥೂ, ಭಲೇ!, ಶಬ್ಭಾಷ್, ಮತ್ತು ಅರೇ ಇತ್ಯಾದಿ
5. ಸಂಭಂದ ಸೂಚಕ ಅವ್ಯಗಳು:
ಎರಡು ಪದಗಳು ಇಲ್ಲವೇ ಎರಡು ವಾಕ್ಯಗಳನ್ನು ಜೋಡಿಸುವ ಶಬ್ಧಗಳಿಗೆ ಸಂಭಂದ
ಸೂಚಕ ಅವ್ಯಗಳೆನ್ನುತ್ತೇವೆ
ಉದಾ: ಆದರೆ, ಮತ್ತು. ಹಾಗು, ಅಥವಾ. ಇಲ್ಲವೆ ಅದುದ್ದರಿಂದ, ಇತ್ಯಾದ್ದಿ.
6. ಅವಧಾರಣಾರ್ಥಕ ಅವ್ಯಗಳು
ಒಂದು ನಿಶ್ಚಿಥ ಭಾವವನ್ನು ಹೇಳುವುದಕ್ಕಾಗಿ ಅವಧರಣೆಯ "ಏ" ಸ್ವರವನ್ನು
ಪೆಡೆದುಕೊಂಡು ಪದವೂ
ಅವಧರಣಾರ್ಥಕ ಅವ್ಯಯವಾಗಿ ಸಿದ್ಧಗೊಳ್ಳುತ್ತದೆ
ಉದಾ: ನೀವೇ, ರಾಮನೇ, ಕಾಯಕವೇ, ನನ್ನದೇ.

ದ್ವಿರುಕ್ತಿ :
ಒಂದು ವಿಶೇಷ ಅರ್ಥವನ್ನು ಅಭಿವ್ಯಕ್ತಿಸುವುದಕ್ಕಾಗಿ ಒಂದು ಪದ ಅಥವ
ಒಂದು ವಾಕ್ಯವನ್ನು ಎರಡೆರಡೂ ಬಾರಿ
ಬಳಸುವುದನ್ನು ದ್ವಿರುಕ್ತಿ ಎನ್ನುತ್ತೇವೆ.
ಉದಾ: ಹೌದು ಹೌದು, ನಿಲ್ಲುನಿಲ್ಲು ಎಲೇ ಎಲೇ, ಕಳ್ಳ ಕಳ್ಳ, ಅಗೋ ಅಗೋ,
ಬನ್ನಿ ಬನ್ನಿ, ಹತ್ತಿರ ಹತ್ತಿರ, ಅಬ್ಬಬ್ಬಾ ಬೇಡ ಬೇಡ, ಇತ್ಯಾದಿ
ಜೋಡಿ ನುಡು (ಜೋಡು ನುಡಿ)
ಕನ್ನಡದಲ್ಲಿ ದ್ವಿರುಕ್ತಿಗಳಂತೆ ಕಾಣುವ ಎಷ್ಟೋ ಪದಗಳಿವೆ ಆದರೆ ಅವುಗಳು
ದ್ವಿರುಕ್ತಿಗಳಲ್ಲ ಏಕೆಂದರೆ ಪೂರ್ವ ಪದಕ್ಕೆ ಅರ್ಥವಿದ್ದು
ಉತ್ತರ ಪದಕ್ಕೆ ಅರ್ಥವಿದುವುದಿಲ್ಲ ಆದರೂ ಜೊತೆ ಜೊತೆಯಾಗಿ ಉಚ್ಛರಿಸಲ್ಪಡುತ್ತವೆ
ಉದಾ: ದೇವರು ದಿಂಡಿರು,
ಕೂಲಿನಾಲಿ
ಬಟ್ಟೆ ಬರೆ
ಸಂಧಿ ಗೊಂಧಿ
ಒಂದೇ ಅರ್ಥ ಕೊಡುವ ಎರದು ಬಿನ್ನ ಭಾಷಾ ಪದಗಳು ಜೊತೆ ಜೊತೆಯಾಗಿ
ಬಳಕೆಗೊಂಡರೆ ಅದನ್ನೂ ಜೋಡು ನುಡಿ ಎನ್ನುತ್ತಾರೆ
ಉದಾ: ಕಡೆ ಲಾಸ್ಟ್
ಕ್ಯಾಚ್ ಇಡಿ
ಸಂತೆಬಜಾರ್
ಗೇಟ್ಬಾಗಿಲು
ಕಾಂಪೌಂಡ್ ಗೋಡೆ
ದ್ವಾರಬಾಗಿಲು
ಆಕಳಗೋಮೂತ್ರ
ಹಣ್ಣು ಹಂಪಲು
ಹಳದಿಪೀತಾಂಬರ
ಸಂಪೂರ್ಣ ವಿರುದ್ಧಾರ್ಥ ಕೊಡುವ ಪದಗಳು
ಉದಾ: ಪಶುಪಕ್ಷಿ
ಮನೆ ಮಠ
ತಂದೆ ತಾಯಿ
ಹಗಲು ರಾತ್ರಿ
ಆಟಪಾಠ ಇತ್ಯಾದಿ
ಪ್ರತಿ ಎರಡನೇ ಅಕ್ಷರ "ಗೀ" ಪದದಿಂದ ರೂಪುಗೊಳ್ಳುವುದು
ಉದಾ: ನಗು ಗಿಗು
ಬುದ್ದಿ ಗಿದ್ದಿ
ರೊಕ್ಕಗಿಕ್ಕ
ನೋವು ಗೀವು
ಶಾಲೆಗೀಲೆ
ಮಾತುಗೀತು
ನುಡಿಗಟ್ಟುಗಳು/ ಪಡೆನುಡಿ
ಅಡ್ದಹಾದಿ ಇಡಿ - ರೀತಿಬಿಟ್ಟು ನಡೆ
ಅಡ್ದಗಾಲು ಹಾಕಿ - ಅಡೆತಡೆ ಮಾಡು
ಅಕಾಶ ಕಳಕೊಂಡೂ ಬೀಳು - ಏನು ತಿಳಿಯಾದಂತಾಗು
ಉಂಡ ಮನೆಗಳ ಎಣಿಸು - ಉಪಕಾರ ಮಾಡಿದವನಿಗೆ ಅಪಕಾರ ಮಾಡು
ಕಣ್ಣಿಡು - ಮನಸ್ಸು ಮಾಡು
ಕಾಲು ಕೆದರು - ಜಗಳ ತೆಗೆ
ಕಾಲಮೇಲೆ ನಿಲ್ಲು - ಸ್ವಾವಲಂಬಿಯಾಗು
ಕಾಲು ಇಡಿ - ಶರಣಾಗು
ಕಿವಿ ಕಚ್ಚು - ಚಾಡಿಹೇಳು
ಕೈ ಕೊಡು - ಮೋಸಮಾಡು/ನೆರವಾಗಿ/ಸಹಾಯಮಾಡು
ಕೆಂಡಕಾರು - ದ್ವೇಷ್ಮ ಮಾಡು/ಸಿಟ್ಟಾಗು
ಕೈಯಲ್ಲಿ ಕಡ್ಡಿ ಕೊಟ್ಟು ಹೇಳು - ಪರಿ ಪರಿಯಿಂದ ಹೇಳು
ಕೈ ನೋಡು - ಬಲ ಪರೀಕ್ಷಿಸು
ಕೈ ಮೇಲೆ ಕೈ ಹಾಕು - ವಚನಕೊಡು
ಕೈ ತೊಳಕೊಂಡು ಬೆನ್ನು ಹತ್ತು - ಗಂಟು ಬೀಳು
ಕೈ ಗೂ ಬಾಯಿಗೂ ಜಗಳ ಹಚ್ಚು - ಊಟ ಮಾಡು
ಕೈ ಚಾಚು - ಬೇಡು
ಕೈಯಾಸೆ ಮಾಡು - ಲಂಚ ನೀಡು
ಗಾಳಿಗೆ ತೂರು - ತಿರಸ್ಕರಿಸು
ಗಿಳಿಓದು - ಅರ್ಥ ತಿಳಿಯದೆ ಓದು
ಗುಟ್ಟು ರಟ್ಟು ಮಾಡು - ಗುಪ್ತ ಸಂಗತಿ ಬಯಲು ಮಾಡು
ಗುಡ್ಡಕ್ಕೆ ಕಲ್ಲು ಹೊರು - ವ್ಯರ್ಥ ಪ್ರಯತ್ನ ಮಾಡು
ಟೊಪ್ಪಿ ಹಾಕು - ಮೋಸ ಮಾಡು
ಟೊಂಕ ಕಟ್ಟು - ಸಿದ್ಧವಾಗು
ತಲೆದೂಗು - ಒಪ್ಪಿಗೆ ಕೊಡು/ಮೆಚ್ಚಿಗೆ ಕೊಡು
ಹೊಟ್ಟೆಯಲ್ಲಿ ಹಾಕಿಕೋ - ಕ್ಷಮಿಸು
ತಲೆ ಜಾಡಿಸು - ಕ್ಷಮಿಸು
ಬೆನ್ನು ತಟ್ಟು - ಹುರುಪು ಕೊಡು
ಮೂಲೆ ಗುಂಪಾಗು - ಕೆಲಸಕ್ಕೆ ಬಾರದಂತೆ
ಶಿಸ್ತಿನ ಸಿಪಾಯಿ - ದಕ್ಷ/ಸಮರ್ಥ
ಬೆತ್ತದ ರುಚಿ ನೋಡು - ಶಿಕ್ಷಿಸು
ಗಂಟಲು ಬಿಗಿ - ಅತೀವ ದುಃಖ
ಮೂಗಿಗೆ ತುಪ್ಪ ಹಚ್ಚು - ಆಸೆ ತೋರಿಸು
ಮುಖದ ನೀರಿಳಿಸು - ಅವಮಾನಗೊಳಿಸು
ಹಣ್ಣಾಗು - ಅನುಭವಿಯಾಗು
ನೆಗೆದು ಬೀಳು - ಸಾಯುವುದು
ಕೈ ಕಚ್ಚು - ನಷ್ಟವಾಗು
ಕಟ್ಟಿಟ್ಟ ಬುತ್ತಿ - ಅನುಭವಿಸಲೇ ಬೇಕಾದ್ದು
ಹಿತ್ತಾಳೆ ಕಿವಿ - ಚಾಡಿಮಾತು ಕೇಳುವವ
ಅಳಿಲು ಸೇವೆ - ನಿಷ್ಟೆ ತುಂಬಿದ ಅಲ್ಪ ಸೇವೆ
ಅತ್ತಿದ ಕೈ - ಪ್ರವೀಣ
ಎರಡು ಬಗೆ - ದ್ರೋಹ ಚಿಂತನೆ
ಕಂಬಿ ಕೀಳು - ಓಡಿಹೋಗು
ಗಾಳ ಹಾಕು - ಪ್ರಲೋಭನೆ ಒಡ್ಡು
ಕೈ ಸುಡು - ನಷ್ಟವಾಗು
ತಿರುಕನ ಕನಸು - ನನಸಾಗದ ಇಚ್ಛೆ
25.03.2011
ಪ್ರಸ್ತಾರ ಹಾಕುವುದು
ಹ್ರಸ್ವಸ್ವರ ಮತ್ತು ಹ್ರಸ್ವಸ್ವರದಿಂದ ಕೂಡಿದ ಅಕ್ಷರ : ಲಘು (U) ಎಂದು
ಪರಿಗಣಿಸಬೇಕು
ದೀರ್ಘಸ್ವರ, ದೀರ್ಘಸ್ವರದಿಂದ ಕೂಡಿದ, ಒತ್ತಕ್ಷರದ ಹಿಂದಿನ, ಅನುಸ್ವಾರ ಮತ್ತು
ವಿಸರ್ಗ ಅಕ್ಷರಗಳನ್ನು ಗುರು (-) ಎಂದು ಪರಿಗಣಿಸಬೇಕು
"ಗುರು" ವಾಗಲು ಹಲವಾರು ಕಾರಣಗಳಿದ್ದರು ಅದನ್ನು ಒಂದೆ ಗುರುವೆಂದು ಪರಿಗಣಿಸಬೇಕು
ಉದಾ: ಕಾಂಗ್ರೇಸ್ ಕಾಂ(-) ಗ್ರೇ( U ) ಸ್ ( U )
ಸೂತ್ರ:
ಯಮಾತಾರಾಜಭಾನಸಲಗಂ
U
-
-

ಮಾ
ತಾ
-
-
-
ಮಾ
ತಾ
ರಾ
-
-
U
ತಾ
ರಾ

-
U
-
ರಾ

ಭಾ
U
-
U

ಭಾ

-
U
U
ಭಾ


U
U
U



U
U
-


ಗಂ
- - -
ಗುರು ಲಘು ಮೂರಿರೆ
ಮ ನ ಗಣ
U U U
- U U
ಗುರು ಲಘು ಮೊದಲಿರೆ
ಭ ಯ ಗಣ
U - -
U - U
ಗುರು ಲಘು ಮದ್ಯ ಬರಲು
ಜ ರ ಗಣ
- U -
U U -
ಗುರು ಲಘು ಕೊನೆ ಬರಲು
ಸ ತ ಗಣ
- - U
ಇದನ್ನು ಸುಲುಭವಾಗಿ ಜ್ನಾಪಕ ಇಟ್ಟುಕೊಳ್ಳಲು ಈ ಕೆಳಗಿನಂತೆ ಹೇಳಬಹುದು
ಮನ ಕ್ಕೆ ಭಯ ಬಂದು ಜರ ದಿಂದ ಸತ ಹೋದ
ಕೃದ್ಧಾಂತ ಅವ್ಯಯಗಳು : ಧಾತು ಕೆಲವು ನಾಮ ಪ್ರತ್ಯೇಯಗಳನ್ನು ಪಡೆಯುವುದರ ಮೋಲಕ
ನಾಮ ಪ್ರಕೃತಿಯಾಗಿ ರೂಪಗೊಳ್ಳುವುದನ್ನು ಕೃದ್ಧಾಂತ ಅವ್ಯಯ ಎನ್ನುತ್ತೇವೆ
" ಕೃತ್ " ಪ್ರತ್ಯೆಯವನ್ನು ಅಂತ್ಯವಾಗಿಸಿಕೊಂಡ ಪದವನ್ನು ಕೃದ್ಧಾಂತ ಪದ ಎನ್ನುತ್ತೇವೆ
ಉದಾ: ಬರೆ + ಉ ವ + ಅ = ಬರೆಯುವ
ಬರೆಯುವ + ಅವಳು = ಬರೆಯುವವಳು
ನೋಡು + ಉ ವ + ಅ = ನೋಡಿದ
ನೋಡೀದ + ಅನು = ನೋಡಿದನು
ಹೆದರು + ಇ ಕೆ = ಹೆದರಿಕೆ
ಇದರಲ್ಲಿ ಮೂರು ಪ್ರಕಾರಗಳು
1. ಕೃದ್ಧಾಂತ ನಾಮ 2. ಕೃದ್ಧಾಂತ ಭಾವ ನಾಮ 3. ಕೃದ್ಧಾಂತ ಅವ್ಯಗಳು

ಕೃದ್ಧಾಂತ ಭಾವ ನಾಮಗಳು :
ಧಾತುಗಳಿಗೆ ಕಾಲವಾಚಕ ಪ್ರತ್ಯೇಯಗ ಮತ್ತು ಕೃತ್ ಪ್ರತ್ಯೇಗಳು ಸೇರಿ ಕೃದ್ಧಾಂತವಾಗಿ ಮತ್ತು
ಪ್ರಥಮ ಪುರುಷದ ಯಾವುದಾದರೊಂದು ಸರ್ವ ನಾಮವನ್ನು ಸೇರಿಕೊಂಡು ಕೃದ್ಧಾಂತ ನಾಮವಾಗಿ ರೂಪುಗೊಳ್ಳುತ್ತದೆ
(ಧಾತು + ಕಾಲ ಸೂಶಕ + ಕೃತ್ + ಕೃದ್ಧಾಂತ + ಪ್ರಥಮ ಪುರುಷದ ಯಾವುದಾದರೊಂದು ಸರ್ವ ನಾಮ
ಉದಾ: : ತಿನ್ನು (ಧಾತು) + ವ ಕಾಲ ಸೂಚಕ) + ಅಅಳು ( ಪ್ರಥಮ ಪುರುಷದ ಸರ್ವ ನಾಮ) = ತಿನ್ನುವಳು
ತಿನ್ನು + ವ + ಅವನು =ತಿನ್ನುವನು ಭವಿಷ್ಯತ್ ಕಾಲ
ಮಾಡು + ವ + ಅವನು = ಮಾಡುವನು ಭವಿಷ್ಯತ್ ಕಾಲ
ಓದು + ಉ ವ + ಅ + ಅವಳು = ಓದುವಳು ಭವಿಷ್ಯತ್ ಕಾಲ
ನೋಡು + ಉ ವ + ಅ + ಅವಳು = ನೋಡುವಳು ಭವಿಷ್ಯತ್ ಕಾಲ
ತಿಳಿ + ದ + ಅ+ಅವನು= ತಿಳಿದವನು ಭೂತ ಕಾಲ
ಬಗೆ + ದ+ ಅ + ಅವಳು = ಬರೆದಳು ಭೂತಕಾಲ

ಕೃದ್ಧಾಂತ ಭಾವನಾಮ:
ಧಾತುವಿನಿಂದ ಹುಟ್ಟುವ ನಾಮ ಪ್ರಕೃತಿಗಳು ಭಾವಸೂಚಕವಾಗಿದ್ದರೆ ಕೃದ್ಧಾಂತ ಭಾವ ನಾಮ ಎನ್ನುತೇವೆ. ಅಥವಾ
ಒಂದು ಧಾತಿವಿಗೆ ಭಾವರ್ಥದಲ್ಲಿ ಕೃತ್ ಪ್ರತೇಯ ಸೇರಿಕೊಂಡರೆ ಅದನ್ನು ಕೃದ್ಧಾಂತ ಭಾವ ನಾಮ ಎನ್ನುತ್ತೇವೆ.
ಉದಾ: " ಇ ಕೆ " ಪ್ರತ್ಯೆಯ
ಅಂಜು+ಇಕೆ=ಅಂಜಿಕೆ
ನಂಬು + ಇಕೆ = ನಂಬಿಕೆ
ಬಾಳು + ಇಕೆ = ಬಾಳಿಕೆ
ಹೆದರು + ಇಕೆ = ಹೆದರಿಕೆ
ನಾಚು + ಇಕೆ = ನಾಚಿಕೆ
" ಇ " ಪ್ರತೇಯ
ಒಪ್ಪು + ಇಗೆ = ಒಪ್ಪಿಗೆ
ಮುತ್ತು + ಇಗೆ = ಮುತ್ತಿಗೆ
ಏಳು + ಇಗೆ = ಏಳೀಗೆ
ಏರು + ಇಗೆ = ಏರಿಗೆ
ಹಾಡು + ಇಗೆ = ಹಾಡಿಗೆ
ಅಡು + ಇಗೆ = ಅಡಿಗೆ
ನಂಬು + ಇಗೆ = ನಂಬಿಗೆ
ಹಾಸು + ಇಗೆ = ಹಾಸಿಗೆ
" ಟ " ಪ್ರತ್ಯೇಯ
ನೋಡು + ಟ = ನೋಟ
ಮಾಡು + ಟ= ಮಾಟ
ಓಡು + ಟ = ಓಟ
ಉಡ + ಟ = ಊಟ
ಕೂಡು + ಟ =ಕೂಟ
ಕಾಡು + ಟ = ಕಾಟ ಇತ್ಯ್ಯಾದಿ
ಕೃದ್ಧಾಂತ ಅವ್ಯಗಳು
ಕ್ರೀಯಾ ಪ್ರಕೃತಿ ಮೇಲೆ ಕೃತ್ ಪ್ರತ್ಯೆಯಗಳು ಸೀರಿ ಅವ್ಯವಾಗಿ ರೂಪಗೊಂಡರೆ ಅದನ್ನು ಕೃದ್ಧಾಂತ ಅವ್ಯಯ ಎನ್ನುತ್ತೇವೆ
ಉದಾ: " ಅಲು " ಪ್ರತ್ಯೇಯ
ಹೋಗು + ಅಲು = ಹೋಗಲು
ಬರೆ + ಅಲು = ಬರೆಯಲು
ತಿನ್ನ+ ಅಲು = ತಿನ್ನಲು
ನೋಡು + ಅಲು = ನೋಡಲು
" ಅಲಿಕೆ " ಪ್ರತ್ಯೇಯ
ಬರೆ+ಅಲಿಕೆ = ಬರೆಯಲಿಕ್ಕೆ
ತಿನ್ನು + ಅಲಿಕೆ = ತಿನ್ನಲಿಕ್ಕೆ
ಆಡ+ಅಲಿಕೆ = ಆಡಲಿಕ್ಕೆ
ನೋಡು + ಅಲಿಕೆ + ನೋಡಲಿಕ್ಕೆ
" ಉತ್ " ಪ್ರತ್ಯೆಯಾ
ಹಾಡ + ಉತ್ತ್ = ಹಾಡುತ್ತಾ
ನೀಡ + ಉತ್ತ್ = ನೀಡುತ್ತಾ
ಬರೆ + ಉತ್ತ್ = ನೀಡುತ್ತಾ
ತಿಳಿ + ಉತ್ = ತಿಳಿಯುತ್ತಾ
ತೆಗೆ + ಉತ್ + ತೆಗೆಯುತ್ತಾ
ನಗೆ + ಉತ್ತ್ = ತೆಗೆಯುತ್ತಾ
" ಅದೇ " ಪ್ರತ್ಯೇಯಾ
ಉಣ್ಣು + ಅದೇ + ಉಣ್ಣದೇ
ಬರೆ + ಅದೇ = ಬರೆಯದೇ
ಹಾಡು + ಅದೇ = ಹಾಡದೇ
ನೋಡು + ಅದೇ = ನೋಡದೇ
" ಇ " ಪ್ರತ್ಯೇಯ
ಮಾಡು + ಇ = ಮಾಡಿ
ನೋಡು + ಇ = ನೋಡೂ
ಬೇಡ + ಇ = ಬೇಡಿ
ಕೇಳ + ಇ = ಕೇಳೀ
" ದು " ಪ್ರತೇಯ
ತಿನ್ನ + ದು = ತಿಂದು
ಬರೆ + ದು = ಬರೆದು
ಕೊರೆ + ದು = ಕೊರೆದು
ತದ್ಧಿತಾಂತ ಅವ್ಯಯಗಳು : ತದ್ದಿತ + ಅಂತ
ಇವುಗಳು ತದ್ಧಿತ್ ಪ್ರತ್ಯೆಯಗಳನ್ನು ಅಂತ್ಯವಾಗಿಸಿಕೊಂಡ ಪದ ತದ್ಧಿತಾಂತ ನಾಮ ಪ್ರಕೃತಿ ಮೇಲೆ ಬೇಕಾದ ಅರ್ಥದಲ್ಲಿ ಸೇರಿ ಇನ್ನೊಂದು ನಾಮ ಪ್ರಕೃತಿಯನ್ನು
ರೂಪಿಸುವ ಪ್ರತ್ಯೆಯಗಳಿಗೆ ತದ್ಧಿತ ಪ್ರೆತ್ಯೇಯಗಳೆಂದು ಅಂತ್ಯವಾದಲ್ಲಿ ಹೊಂದಿದ ಪದವನ್ನು ತದ್ಧಿತಾಂತ ಎಂದು ಕರೆಯುತ್ತೇವೆ
ಇದರಲ್ಲಿ ಮೂರು 3 ಪ್ರಕಾರಗಳು
1. ತದ್ಧಿತಾಂತ ನಾಮ 2. ತದ್ಧಿತಾಂತ ಭಾವ ನಾಮ ಮತ್ತು 3. ತದ್ಧಿತಾಂತ ಅವ್ಯಗಳು
"ಗಾರ" ಪ್ರತ್ಯೇಯ
ಸಾಲಗಾರ
ಮೋಸಗಾರ
ಮಾಲೆಗಾರ
ಸೊಗಸುಗಾರ
ಬಳೆಗಾರ
ಛಲಗಾರ
ಹೂಗಾರ
ನೋಟಗಾರ

" ಕಾರ : ಪ್ರತೇಯಾ

ಕಲೆಕರ
ಕೂಲಿಕಾರ
ಓಲೆಕಾರ
ಅಂಗಡಿಕಾರ

:"ಇಗ"
ಗಾಣಿಗ
ತೊಟ್ಟಿಗ
ಅಂಬಿಗ
ಕನ್ನಡಿಗ
" ವಳ "
ಮಡಿವಾಳ
ಗೋಮಾಳ
ಹಡಪವಳ
" ವಂತ "
ಹೃಧಯವಂತ
ನೀತಿವಂತ
ಗುಣವಂತ
ಕಲಾವಂತ
ಲಿಂಗವಂತ
ಬುದ್ದಿವಂತ
" ಅಳಿ "
ಮಾತಾಳಿ
ಜೂದಾಳಿ
ಓದಾಳಿ
" ಇತ್ತಿ"
ಹೂವಾಡಗಿತ್ತಿ
ಒಕ್ಕಲಗಿತ್ತಿ
ಗೌಡಗಿತ್ತಿ
ಕಳಸಗಿತ್ತಿ
ಸೂಲಗಿತ್ತಿ
ಅಗಸಗಿತ್ತಿ
" ಇ "
ಮುದುಕಿ
ಹುಡುಗಿ
"ತ್ತಿ"
ಗೊಲ್ಲತಿ
ಗೌಡತಿ
ವಡ್ಡತಿ

ತದ್ಧಿತಾಮ್ತ ಭಾವನಾಮ
" ತನ "
ಬದತನ
ಸಿರಿತನ
ದಡ್ಡತನ
ಹಿರಿತನ
ಕಿರಿತನ
ಶೂರತನ
"ಉ"
ಕರಿ + ಉ = ಕಪ್ಪು
ಬಿಳಿ + ಉ = ಬಿಳಿಪು
ಇನಿ + ಇ + ಇಂಪು
ತಣ್ನನೆ + ಉ = ತಂಪು
ನುಣ್ಣನೆ + ಉ = ನುಣುಪು
:" ಮೇ "
ಜಾಣ್ಮೆ
ಹಿರಿಮೆ, ಹೆಮ್ಮೆ

ತಧ್ಧಿತಾಂತ ಅವ್ಯಯಗಳು
ಉದಾ: " ಅಂತೆ " ಪ್ರತ್ಯೇಯ
ರಾಮನಂತೆ
ಸೀತೆಯಂತೆ
ಕೋತಿಯಂತೆ
ಕುದುರೆಯಂತೆ
ಶಾಲೆಯಂತೆ
" ವೋಲ್" ಪ್ರತ್ಯೇಯಾ
ರಾಮನ್ವೋಲ್
ಚಂದ್ರನೋಲ್
" ಓಸ್ಕರ "
ವಿಧ್ಯಾರ್ಥಿಗೋಸ್ಕರ
ನಮಗೋಸ್ಕರ
ಊಟಕೊಸ್ಕರ
" ಓಸುಗ "
ರಾಮನೋಸಗ
ಚಂದನೋಸಗ
ಅಕ್ಕನಿಗೋಸಗ
ದ್ರೌಪದಿಗೋಸಗ
"ಆಗಿ"
ಅಕ್ಕನಿಗಾಗಿ
ನಿನಗಾಗೆ
ಪ್ರೀತಿಗಾಗಿ
ಪರೀಕ್ಷೆಗಾಗಿ
" ಇಂತ "
ಆಟಕ್ಕಿಂತ
ಇಪ್ಪಿಗಿಂತ
ತಾಯಿಗಿಂತ
ದೇವರಿಗಿಂತ
" ವರಗೆ"
ಊರವರಗೆ
ಶಾಲೆವರಗೆ
ಮನೆವರಗೆ
" ತನಕ "
ಮನೆತನಕ
ಊರತನಕ
ಶಾಲೆತನಕ
ಪರೀಕ್ಷೆ ತನಕ
" ಓತ "
ಛಂಧೋ ಗ್ರಂಥಗಳು
ಛಂದೋಂಬುದಿ : 1 ನೇ ನಾಗವರ್ಮ
ಛಂದಸ್ಸು : ಗುಣಚಂದ್ರ
ಘ್ಹಟ್ಟ ತ್ಯಾಯ : ಶಾಲ್ಯದ ಕೃಷ್ಣರಾಜ
ಛಂಧಾನುಶಾಸನ : ಜಯ ಕೀರ್ತ
ಮನಸ್ಸೋಲ್ಲಾಸ ; 3 ನೇ ಸೋಮಶೇಖರ
ಗಣ
ಗಣ ಎಂದರೆ ಗುಂಪು ಅಥವಾ ಸಮೂಹ ಎಂದು ಅರ್ಥವಾದರು ಛಂಧೋಪರಿಭಾಷೆಯಲ್ಲಿ
ಕೆಲವು ನಿಯಮಗಳಿಗನುಸಾರವಾಗಿ ವಿಂಗಡಿಸಿದ ಅಕ್ಷರಗಳ ಗುಂಪನ್ನು ಗಣ ಅನ್ನುತ್ತೇವೆ.
ಗಣದ ಪ್ರಕಾರಗಳು
1. ಅಕ್ಷರ (ವರ್ಣ) ಗಣ
2. ಮಾತ್ರ ಗಣ
3. ಅಂಶ ಗಣ
ಛಂದಸ್ಸು ಶಾಸ್ತ್ರ:
ಸಾಹಿತ್ಯವನ್ನು ಅಧ್ಯನ ಮಾಡುವಾಗ ನಾವು ಗದ್ಯ ಮತ್ತು ಪದ್ಯ ಎರಡು ನೆಲೆಯಲ್ಲಿ ವಿಂಗಡಿಸುತ್ತೇವೆ
ವ್ಯಾಕರಣ ಗದ್ಯ ಮತ್ತು ಪದ್ಯ ಎರಡಕ್ಕು ಅನ್ವಯಿಸಿದರೆ
ಛಂದಸ್ಸು ಕೇವಲ ಪದ್ಯಕ್ಕೆ ಮಾತ್ರ ಸೀಮಿತವದದ್ದು ಅಂದರೆ
ಪದ್ಯ ರಚನೆಯ ಶಾಸ್ತ್ರವನ್ನು ತಿಳಿಸುವುದೇ ಚಂದಸ್ಸು ಶಾಸ್ತ್ರ
ಕಾವ್ಯದ ಅಂತರಿಕ ಅಂಗಗಳು
ಭಾವ, ರಸ, ದ್ವನಿ, ಇವು ಕಾವ್ಯ ರಸದ ಆಂತರಿಕ ಅಂಗಗಳು
ಛಂದಸ್ಸು ಕಾವ್ಯದ ಒಂದು ಅಂಗ, ಸಂಧ್ಯಾಕಷರ ಮತ್ತು ಸಂದ್ಯಾಕ್ಷರಗಳಿಂದ ಒಳಗೂಡಿದ ಅಕ್ಷರ ಗುರುವೆಂದು ಪರಿಗಣಿತವಾಗುತ್ತದೆ
ಸಂಧ್ಯಾಕ್ಷರಗಳು : ಐ ಮತ್ತು ಔ
ಉದಾ: ಅವನು ದೈತ್ಯ UUU --
ವ್ಯಂಜನಾಕ್ಷರಕ್ಕೆ ಛಂದಸ್ಸು ಶಾಸ್ತ್ರದಲ್ಲಿ ತನ್ನದೇ ಆದ ಅಸ್ತಿತ್ವ ಇಲ್ಲ. ಅದು ಹಿಂದಿನ ಅಕ್ಷರದೊಂದಿಗೆ ಸೇರಿ ಗುರು ವಿನ ಬೆಲೆ ಪಡೆಯುತ್ತದೆ
ಉದಾ: - U -
ಬೆ ಟ್ಟ ದೊ ಳ್
U
ವಿ
-
ಧ್ಯಾ
-
ಶ್ರೀ
U

U

U

-
ಶ್ರೀ
-
ಲಂ
-
ಕಾ
U
ಹೃ
U

U

U
ಗಿ
-
ರೀ
-
ಶಂ
U

-
ರೇಂ
-
ದ್ರಂ
U
ಸ್ವ
-
ರಾ
-
ಜ್ಯ
U
ವಿ
-
ನೋ
U


1.ಅಕ್ಷರ ಗಣ : ಅಕ್ಷರಗಳ ನಿಯಮಕ್ಕೆ ಒಳಪಟ್ಟ ಗಣಗಳೇ ಅಕ್ಷರ ಗಣ. ಇಲ್ಲಿ ಗಣವನ್ನು ಅಳೆಯುವ ಮಾನದಂಡ ಅಕ್ಷರಗಳು
ಮೂರು ಅಕ್ಷರಕ್ಕೊಂದು ಗಣ ಕಡ್ಡಾಯ, ಆದರೆ ಪ್ರಸ್ತಾರ, ವಿನ್ಯಾಸ ಮತ್ತು ಕ್ರಮ ಹೀಗೆ ಇರಬೇಕೆಂಬ ನಿಯಮವಿಲ್ಲ,
ಅವು ಹೊಂದಿದ ಪ್ರಸ್ತಾರದ ಹಿನ್ನೆಲೆಯಲ್ಲಿ ಅಕ್ಷರಗಣವನ್ನು 8 ಪ್ರಕಾರವಾಗಿ ವಿಂಗಡಿಸಲಾಗಿದೆ
ಗುರು ಲಘು ಮೂರಿರೆ " ಮ ನ " ಗಣ U U U - - -
ಗುರು ಲಘು ಮೊದಲಿರೆ " ಭ ಯ " ಗಣ - U U , - U U
ಗುರು ಲಘು ಮದ್ಯೆ ಬರಲು " ಜ ರ" ಗಣ, U - U, - U -
ಗುರು ಲಘು ಕೊನೆ ಬರಲು " ಸ ತ "ಗಣ . U U -, - - U
ಇದನ್ನು ಜ್ನಾಪಕ ಇಟ್ಟುಕೊಳ್ಳಲು ಸೂತ್ರ ಮನ ಕ್ಕೆ ಭಯ ಬಂದು ಜರ ದಿಂದ ಸತ ಹೋಯಿತು.
ಅಕ್ಷರ (ವರ್ಣ) ವೃತ್ತಗಳು :
ಇವು ಸಂಸ್ಕೃತ ದಿಂದ ಕನ್ನಡಕ್ಕೆ ಬಂದಿವೆ. ಅಕ್ಷರಗಳಿಂದ ಕೂಡಿದ ಪದ್ಯ ಜಾತಿಗಳನ್ನು ಅಕ್ಷರ ವೃತ್ತಗಳೆನ್ನುತ್ತೇವೆ.
ಇಲ್ಲಿ ಪದ್ಯವನ್ನು ಅಳೆಯುವ ಮಾನದಂಡ ಅಕ್ಷರಗಳು, ಇದರಲ್ಲಿ 3 ಪ್ರಕಾರಗಳು
1. ಸಮವೃತ್ತ 2.ಅರ್ಧ ವೃತ್ತ 3.ವಿಷಯ ವೃತ್ತ
ಸಮ ವೃತ್ತ: ಬಲಕೆಗೊಳ್ಳುವ ನಾಲ್ಕು ಚರಣಗಳ ಲಕ್ಷಣಗಳು ಒಂದೇ ಆಗಿದ್ದರೆ ಅದನ್ನು ಸಮ ವೃತ್ತ ಎನ್ನುತ್ತೇವೆ.
ಇವುಗಳಲ್ಲಿ ಸುಮಾರು 150 ಬಗೆಗಳಿವೆ, ಆದರೆ ಕನ್ನಡ ಕವಿಗಳು 6 ವೃತ್ತಗಳನ್ನು ವಿಶೇಷವಾಗಿ ಬಳಿಸಿಕೊಂಡಿರುವುದರಿಂದ
ನಾಗವರ್ಮ ತನ್ನ ಛಂದೋಬುಧಿಯಲ್ಲಿ ಆವುಗಳನ್ನು "ಖ್ಯಾತ ಕರ್ನಾಟಕ ವೃತ್ತ"ಗಳು ಎಂದು ಕರೆದಿದ್ದಾನೆ
ಅಲ್ಲದೇ 6 ವೃತ್ತಗಳ ಲಕ್ಷಣವನ್ನು ಒಂದು ವೃತ್ತದಲ್ಲಿ ಸ್ಪಷ್ಟಪಡಿಸಿದ್ದಾನೆ
ಗುರುವೊಂದಾದಿಯೊಳುತ್ಪಲಂ ಗುರುಮೊದಲ್ ಮೂರಾಗೆ ಶಾರ್ದೂಲಮಾ ಗುರುನಾಲ್ಕಾಗಿರಲಂತು ಸ್ರಗ್ಧರೆ
ಲಘುದ್ವಂದ್ವಂಗುರು ದ್ವಂದ್ವಮಾಗಿರೆ ಮತ್ತೇಭ ಲಘುದ್ವಯತ್ರಿಗುರುವಿಂದಕ್ಕುಂ ಮಹಾಸ್ರಗ್ಧರಾ ಹರೀಣಾಕ್ಷಿ,
ಲಘು ನಾಲ್ಕು ಚಂಪಕ ಮಿವಾರಮ್ ಖ್ಯಾತ ಕರ್ಣಾಟಕಂ.
ಖ್ಯಾತ ಕರ್ನಾಟಕ ವ್ರುತ್ತಗಳು
1. ಉತ್ಪಲ ಮಾಲಾ ವೃತ್ತ
2. ಶಾರ್ದೂಲ ಮಾಲಾ ವೃತ್ತ
3. ಸ್ರಗ್ಧರೆ ವೃತ್ತ
4. ಮತ್ತೇಭ ವೃತ್ತ
5. ಮಹಾ ಸ್ರಗ್ಧರೆ ವೃತ್ತ
6. ಚಂಪಕ ಮಾಲ ವೃತ್ತ
1. ಚಂಪಕ ಮಾಲಾ ವೃತ್ತ: ಪ್ರತಿ ಪಧದಲ್ಲಿ 4 ಚರಣಗಳಿದ್ದು ಪ್ರತೀ ಚರಣದಲ್ಲಿ 21 ಅಕ್ಷರಗಳು
ಸೂತ್ರ: ನ ಜ ಭ ಜ ಜಂ ಜ ರ
U

U

U

U

-
ಜಂ
U

U

U

U
ಗೆ
U
ಗೊ
-
ಳು
U
ತ್ತಿ
U
ರೆ
-
ಚಂ
U

U

-
ಮಾ
U
ಲೆ
-
ಯೆಂ
U

-
ಪರ್
ಉತ್ಪಲ ಮಾಲಾ ವೃತ್ತ: ಪದ್ಯದ ಪ್ರತೀ ಚರಣದಲ್ಲಿ 20 ಅಕ್ಷರಗಳಿದ್ದು ,
ಪ್ರತಿ ಚರಣದಲ್ಲಿ: ಭ ರ ನ ಭ ಭ ರ
ಸೂತ್ರ: ಉ ತ್ಸ ಲ ಮಾ ಲೆ ಯೆ ಪ್ಪು ದು ಭ ರ ನ ಭ ಭಂ ರ ಲ ಗಂ ನೆ ಗೆ ಳ್ದಿ ರ ಲ್

-

U
ತ್ಪ
U

-
ಮಾ
U
ಲೆ
U
ಯೆ
-
ಪ್ಪು
U
ದು
U

U

U

U

U
ಭಂ
U

U

-
ಗಂ
U
ನೆ
-
ಗೆ
U
ಳ್ದಿ
-
ರಲ್

ಶಾರ್ದೂಲ ಮಾಲಾ ವೃತ್ತ: ಪ್ರತೀ ಚರಣದಲ್ಲಿ 19 ಅಕ್ಷರಗಳು, ಮತ್ತು
ಪ್ರತೀ ಚರಣದಲ್ಲು : ಮ ಸ ಜ ಸ ತಂ ತ
ಸೂತ್ರ:
-

-
ಣ್ಣೊ
-
ಪ್ಪ
-
ಲ್
U

U

-
ಜಂ
U

-
ತಂ
U

U

U
ಮು
-
ಮಾ
-
ಶಾ
-
ರ್ದೂ
U

U
ವಿ
-
ಕ್ರೀ
U
ಡಿ
-
ತಂ

ಮತ್ತೇಭ ವಿಕ್ರೀಡಿತ : ಪ್ರತಿ ಚರಣದಲ್ಲಿ 20 ಅಕ್ಷರಗಳು
ಪ್ರತೀ ಚರಣದಲ್ಲಿ ಸ ಭ ರ ನ ಮ ಯ ಗಳು ಬರುತ್ತವೆ ಮತ್ತು ಕೊನೆಯಲು ಒಂದು ಲಘು ಮತ್ತು ಒಂದು ಗುರು ಬರುತ್ತದೆ
ಸೂತ್ರ
U

U

-
ರಂ
-
ನಂ
U

U

-
ಲಂ
U

-
ಮೂ
U

U
ಗೆ
U
ಗೊ
U

-
ಲ್
-

-
ತ್ತೇ
U

U
ವಿ
-
ಕ್ರೀ
U

-
ತಂ
:
ಸ್ರಗ್ಧರೆ : ಇವುಗಳ ಬಳಕೆ ಕನ್ನಡದಲ್ಲಿ ತೀರ ಕಡಿಮೆ
ಪ್ರತೀ ಚರಣದಲ್ಲಿ 21 ಅಕ್ಷರಗಳು ಬರುತ್ತವೆ
ಪ್ರತೀ ಚರಣದಲ್ಲಿ: ಮ ರ ಭ ನ ಯ ಯ ಯ
-
ತೋ
-

ಲ್
-
ಮಂ
-
ರಂ
U

-
ನಂ
-
ಮೂ
U

U

U

U
ಮು
U

-
ದೆಂ
-
ತಾ
-
ಸ್ರ
U
ಗ್ಧ
-
ರಾ
-
ವೃ
U
ತ್ತ
U

-
ಕ್ಕುಂ

ಮಹಾ ಸ್ರಗ್ಧರಾ: ಪ್ರತೀ ಚರಣದಲ್ಲಿ 22 ಅಕ್ಷರಗಳು
ಪ್ರತೀ ಚರಣದಲ್ಲಿ ಸ ತ ತ ನ ಭ ರ ರ

ಸೂತ್ರ:
U

U

-
ತಂ
-
ನಂ
-
ಸಂ
U

-
ರಂ
-
ಗಂ
U
ಸೆ
U
ರೆ
U
ದೆ
U
ಸೆ
U

U

-
ಹಾ
-
ಸ್ರ
U
ಗ್ಧ
-
ರಾ
-
ವೃ
U
ತ್ತ
U

-
ಕ್ಕುಂ
ಕ್ರ ಸಂಖ್ಯ
ವೃತ್ತ
ಚರಣಗಳ ಸಂಖ್ಯ
ಅಕ್ಷರಗಳು
ಗಣಗಳು
1
ಚಂಪಕ ಮಾಲಾ
4
21
ನ ಜ ಭ ಝ ಜಂ ಜಂ ರ
2
ಉತ್ಸಲ ಮಾಲಾ
4
20
ಭ ರ ನ ಭ ಭ ರ
3
ಶಾರ್ದೂಲ ಮಾಲಾ
4
19
ಮ ಸ ಜ ಸ ತ ತಂ
4
ಮತೇಭ ವಿಕ್ರೀಡಿತ
4
20
ಸ ಭ ರ ನ ಮ ಯ
5
ಸ್ರಗ್ಧರೆ
4
21
ಮ ರ ಭ ನ ಯ ಯ ಯ
6
ಮಹಾ ಸ್ರಗ್ಧರೆ
4
22
ಸ ತ ತ ನ ಭ ರ ರ
ಮಾತ್ರ ಗಣ:
ಮಾತ್ರೆಗಳಿಂದ ಕೂಡ್ದ ಗಣಗಳು ಮತ್ತು ನಿಯಮಕ್ಕೊಳಪಟ್ಟ ಗಣಗಳನ್ನು ಮಾತ್ರೆ ಗಣಗಳೆನ್ನುತ್ತೇವೆ.
ಇಲ್ಲಿ ಗಣವನ್ನು ಅಳೆಯುವ ಮಾನ ದಂಡ ಮಾತ್ರೆಗಳು
ಉದಾ:
U U U - U
ಬ ಸ ವ ರಾ ಜ
ಒಂದು ಹ್ರಸ್ವಸ್ವರವನ್ನು ಉಚ್ಚರಿಸಲು ತೆಗೆದುಕೊಳ್ಳುವ ಕಾಲವನ್ನು ಮಾತ್ರೆ ಎನ್ನುತ್ತೇವೆ,
ಈ ಮಾತ್ರ ಮೌಲ್ಯವನ್ನು ಲಘು (U) ಮತ್ತು ಗುರು (-) ಚಿಹ್ನೆಯಿಂದ ಗುರುತಿಸುತ್ತೇವೆ
ಮಾತ್ರಗಣಗಳಲ್ಲಿ 3 ಪ್ರಕಾರಗಳು
1. ಮೂರು ಮಾತ್ರೆ ಗಣ 2. ನಾಲ್ಕು ಮಾತ್ರೆ ಗಣ 3. ಐದು ಮಾತ್ರೆ ಗಣ
1. ಮೂರು ಮಾತ್ರೆ ಗಣ: ಪ್ರತಿ ಮಾತ್ರಗಣದ ಮದ್ಯೆ ಪ್ರತ್ಯೇಕತೆ ಇರಬೇಕು ಅಂದರೆ ಒಂದು
ಗುರುವಿನ ಎರಡು ಮಾತ್ರೆಗಳು ಹಾಚೆ ಈಚೆ ಗಣಕ್ಕೆ ಹಂಚುವಂತಿಲ್ಲ
ಮಾತ್ರ ವೃತ್ತಗಳು : ಇದು ಪ್ರಾಕೃತದಿಂದ ಕನ್ನಡಕ್ಕೆ ಬಂದಿವೆ ಮಾತ್ರ ಗಣಗಳಿಂದ ಕೂಡಿದ ಪದ್ಯ ಜಾತಿಗಳಿಗೆ ಮಾತ್ರೆ ವೃತ್ತಗಳೆನ್ನುತ್ತಾರೆ
ಮಾತ್ರೆ ವೃತ್ತಗಳಲ್ಲಿ ಪ್ರಧಾನವಾದುವೆಂದರೆ ಕಂದಪದ್ಯ, ಷಟ್ಪದಿ ಮತ್ತು ರಗಳೆ
ಕಂದ ಪದ್ಯ:
ಲಕ್ಷಣಗಳು : ಪ್ರತೀ ಪದ್ಯದಲ್ಲಿ 4 ಚರಣಗಳು
1 ಮತ್ತು 3 ನೇ ಚರಣಗಳು ಕಿರಿ ಚರಣಗಳು ಇವು 4 ಮಾತ್ರೆಯ 3 ಗಣಗಳನ್ನು ಹೊಂದಿರುತ್ತವೆ
2 ಮತ್ತು 4 ನೇ ಚರಣಗಳು ಹ್ರಿ ಚರಣಗಳು ಇವು 4 ಮಾತ್ರೆಯ 5 ಗಣಗಳನ್ನು ಹೊಂದಿರುತ್ತವೆ.
ಇವು ಅರ್ದ ಸಮವೃತ್ತ
ಪೂರ್ವ ಮತ್ತು ಉತ್ತರಾರ್ದಗಳ ವಿಷಯ ಸ್ಥಾನದಲ್ಲಿ ಮದ್ಯ ಗುರು ವುಳ್ಳ ಗಣ ಅಥವಾ ಜಗಣ ಬರಬಾರದು
ಪೂರ್ವಾರ್ದ ಮತ್ತು ಉತ್ತರಾರ್ದಗಳಿಗೆ 6ನೇ ಸ್ಥಾನದಲ್ಲಿ ಮದ್ಯೆ ಗುರುವುಳ್ಳ ಗಣ ಅಥವಾ 4 ಲಘುವುಳ್ಳ ಗಣ ಬರಬೇಕು
ಉದಾ
U U U U
ಪ ಡೆ ಯ ಡೆ
U U U U
ಯೆ ಕ ಡೆ ಯ
U U -
ಬ ಡ ವರ್
4 ಮಾತ್ರೆಯ 3 ಗಣಗಳು
U U U U
ಕ ಡೆ ಪ ಡೆ
U U -
ದ ನು ಚ
U U -
ಕ್ರ ವ ರ್ತಿ
- -
ಯೊ ಳ್ ತೈ
U U -
ಲ ಪ ನೊ ಳ್
4 ಮಾತ್ರೆಯ 5 ಗಣಗಳು
U U -
ಪ ಡೆ ದಂ
U U -
ಮ ಹಿ ಮೆ
U U -
ನ್ನ ತಿ ಯಂ
4 ಮಾತ್ರೆಯ 3 ಗಣಗಳು
U U -
ಪ ಡೆ ದಂ
U U -
ಕ ವಿ ಚ
U U -
ಕ್ರ ವ ರ್ತಿ
U U -
ವೆ ಸ ರಂ
- -
ರ ನ್ನಂ
4 ಮಾತ್ರೆಯ 5 ಗಣಗಳು
ಷಟ್ಪದಿ : ಇದರ ಹೆಸರೇ ಸೂಚುಸುವಂತೆ 6 ಪಾದಗಳು (ಸಾಲುಗಳಿಂದ) ಜಾತಿ
ಲಕ್ಷಣಗಳು: 1. ಪ್ರತೀ ಪದ್ಯದಲ್ಲಿ 6 ಸಾಲುಗಳಿರುತ್ತವೆ.
2. 1,2,4,5 ಚರಣಗಳು ಕಿರಿ ಚರಣಗಳು.
2. 3ನೇಯ 6 ನೇಯ ಚರಣಗಳು ಹಿರಿ ಚರಣಗಳಾಗಿದ್ದು . ಕಿರಿ ಚರಣದ ಒಂದೂವರೆ ಪಟ್ಟು ದೊಡ್ಡದಾಗಿದ್ದು
ಮೇಲೊಂದು ಗುರುವನ್ನು ಪಡೆದಿರುತ್ತದೆ.
ಷಟ್ಪದಿಗಳಲ್ಲಿ 6 ಪ್ರಕಾರಗಳು
1. ಶರ ಷಟ್ಪದಿ 2. ಕುಸುಮ ಷಟ್ಪದಿ 3. ಭೋಗ ಷಟ್ಪದಿ 4. ಭಾಮಿನಿ ಷಟ್ಪದಿ 5. ಪರಿವರ್ದಿನಿ ಷಟ್ಪದಿ ಮತ್ತು 6. ವಾರ್ದಕ ಷಟ್ಪದಿ
ಶರ ಷಟ್ಪದಿ : ಪ್ರತಿ ಕಿರಿ ಚರಣದಲ್ಲಿ 4 ಮಾತ್ರೆಯ 2 ಗಣಗಳು
ಪ್ರತಿ ಹಿರಿ ಚರಣದಲ್ಲಿ 4 ಮಾತ್ರೆಯ 3 ಗಣಗಳು ಮತ್ತು ಮೇಲೊಂದು ಗುರುವಿರುತ್ತದೆ
ಉದಾ:


- U U
ಈ ಶ ನ
U U U U
ಕ ರು ಣೆ ಯ
4 ಮಾತ್ರೆಯ 2 ಗಣಗಳು
- U U
ನಾ ಶಿ ಸು
U U U U
ವಿ ನ ಯ ದಿ
4 ಮಾತ್ರೆಯ 2 ಗಣಗಳು
- U U
ದಾ ಸ ನ
- U U
ಹಾ ಗೆ ಯ
- U U
ನೀ ಮ ನ
-
ವೇ
4 ಮಾತ್ರೆಯ 3 ಗಣಗಳು ಮತ್ತು ಮೇಲೊಂದು ಗುರು
- U U
ಕ್ಲೇ ಶ ದ
U U U U
ವಿ ಧ ವಿ ಧ

4 ಮಾತ್ರೆಯ 2 ಗಣಗಳು
- U U
ಪಾ ಶ ವ
U U U U
ಹ ರಿ ದು ವಿ

4 ಮಾತ್ರೆಯ 2 ಗಣಗಳು
- U U
ಲಾ ಸ ದಿ
- U U
ಸ ತ್ಯ ವ
u u u u
ತಿ ಳಿ ಮ ನ
-
ವೇ
4 ಮಾತ್ರೆಯ 3 ಗಣಗಳು ಮತ್ತು ಮೇಲೊಂದು ಗುರು


ಕುಸುಮ ಷಟ್ಪದಿ : ಪ್ರತಿ ಕಿರಿ ಚರಣದಲ್ಲು 5 ಮಾತ್ರೆಯ 2 ಗಣಗಳು
ಪ್ರತಿ ಹಿರಿ ಚರಣದಲ್ಲಿ 5 ಮಾತ್ರೆಯ 3 ಗಣಗಳು ಮತ್ತು ಮೇಲೊಂದು ಗುರು
U U U -
ಬಿ ಸಿ ಲಿ ಗಂ
- U -
ಗಾ ಳಿ ಗಂ
5 ಮಾತ್ರೆಯ 2 ಗಣಗಳು
U U - U
ನ ಸು ಬಾ ಡೆ
UU U U U
ತ ನು ಲ ತಿ ಕೆ
5 ಮಾತ್ರೆಯ 2 ಗಣಗಳು
U U U -
ಕು ಸು ಮ ಕೋ
U U U U
ಮ ಳೆ ಹೊ ಸೆ
U
ದು
- U -
ಹೂ ವಿ ನಂ
-
ತೆ
5 ಮಾತ್ರೆಯ 3 ಗಣಗಳು ಮೇಲೊಂದು ಗುರು


ಬೋಗ ಷಟ್ಪದಿ : ಪ್ರತಿ ಕಿರಿ ಚರಣದಲ್ಲಿ 3ಮಾತ್ರೆಯ 4 ಗಣಗಳು
ಪ್ರತಿ ಹಿರಿ ಚರಣದಲ್ಲು 3ಮಾತ್ರೆಯ 6 ಗಣಗಳು
U U U
ತಿ ರು ಕ
- U
ನೋ ರ್ವ
- U
ನೂ ರ
- U
ಮುಂ ದೆ
U U U
ಮು ರು ಕು
- U
ಧ ರ್ಮ
- U
ಶಾ ಲೆ
- U
ಯ ಲ್ಲಿ
U U U
ವೊ ರ ಗಿ
- U
ರು ತ್ತ
- U
ಲೊಂ ದು
U U U
ಕ ನ ಸ
- U
ಕಂ ಡ
- U
ನಂ ತ
-
ನೇ

ಭಾಮಿನಿ ಷಟ್ಪದಿ : ಪ್ರತಿ ಕಿರಿ ಮತ್ತು ಹಿರಿ ಚರಣದಲ್ಲಿ 3ಮಾತ್ರೆಯ ಗಣದ ಮುಂದೆ 4 ಮಾತ್ರೆಯ ಗಣ 2 ಸಲ
ಮತ್ತು ಹಿರಿ ಚರಣದಲ್ಲಿ ಮೇಲೊಂದು ಗುರು ಬರಬೇಕು
- U
ಸ ತ್ತ
U U U U
ವ ರ ಕ ಥೆ
- U
ಯ ಲ್ಲ
U U U U
ಜ ನ ಪ ದ
- U
ಕು ತ್ತ
U U U U
ರ ಲಿ ಕು ದು
- U U
ಕ ರ್ಮ ರ



- u
ಕ ತ್ತ
U U U U
ಲೆ ಗೆ ಸಿ ಲು
U U U
ಕು ವ ರ
- U U
ಸೀ ಮೆ ಯ
- U
ಹೋ ಲು
U -
ಬು ತಾ
-
ನು
ಪರಿವರ್ಧಿನಿ ಷಟ್ಪದಿ: ಪ್ರತಿ ಕಿರಿ ಚರಣದಲಿ 4ಮಾತ್ರೆಯ 4 ಗಣಗಳು
ಪ್ರತಿ ಹಿರಿ ಚರಣದಲ್ಲಿ 4ಮಾತ್ರೆಯ 6 ಗಣಗಳು ಮೇಲೊಂದು ಗುರು ಬರಬೇಕು
U U U U
ದು ರಿ ತ ವ
- U U
ನಂ ಬೆ ಳೆ
U U U U
ವು ದ ಕೆ ಪೊ
- U U
ಲಂ ಕೊ ಲೆ
U U U U
ಪ ರಿ ಕ ಲಿ
U U U U
ಸಿ ದ ನ ವ
- U U
ದೋ ಹ ಳ
U U -
ಮ ನೃ ತಂ
U U -
ಪ ರಿ ಕಾ
U U U U
ಲು ದ ಕ ಮ
U U U U
ದ ತೆ ಕ ಳ
- -
ವ ನ್ನ
- -
ಸ್ತ್ರೀ ಸಂ
U U -
ಗ ವ ಗೆ
-
ಯೇ

ವಾರ್ದಕ ಷಟ್ಪದಿ : ಪ್ರತಿ ಕಿರಿ ಚರಣದಲ್ಲಿ 5 ಮಾತ್ರೆಯ 4 ಗಣಗಳು
ಪ್ರತಿ ಹಿರಿ ಚರಣದಲ್ಲಿ 5ಮಾತ್ರೆಯ 6 ಗಣಗಳು
- U U U
ನ ಟ್ಟಿ ರು ಳು
U U - U
ಸು ಡು ಗಾ ಡೊ
- U -
ಳೊ ಬ್ಬ ನೋ
- U -
ನಂ ತೆ ಬಾ
- U U U
ಯಿ ಟ್ಟು ಹು ಲು
U U - U
ಬು ವ ವೀ ರ
- U -
ನಾ ರಿ ಯಾ
U U - U
ವ ಳೊ ಮೀ ರೆ
- U -
ಸು ಟ್ಟೆ ಯಾ
U U U U U
ದ ಡೆ ನಿ ನ ಗೆ
- U -
ವೀ ರ ಬಾ
U U - U
ಹು ಕ ನಾ ಣೆ
- U U U
ಕ ದ್ದು ಸು ಡ
- U -
ಬಂ ದೆ ನಿ
-
ನ್ನ


ಕ್ರಮ ಸಂಖ್ಯ
ಷಟ್ಪದಿ
ಕಿರಿ ಚರಣ
ಹಿರಿ ಚರಣ
ಒಟ್ಟು ಮಾತ್ರೆಗಳು
1
ಶರ ಷಟ್ಪದಿ
4/4 = 8
4/4/4+2=14
2
ಕುಸುಮ ಷಟ್ಪದಿ
5/5 = 10
5/5/5+2=17
3
ಭೋಗ ಷಟ್ಪದಿ
3/3/3/3/ = 12
3/3/3/3/3/3+2 =20
4
ಭಾಮಿನಿ ಷಟ್ಪದಿ
3/4 3/4 = 14
3/4 3/4 3/4 +2 =23
5
ಪರಿವರ್ಧಿನಿ ಷಟ್ಪದಿ
4/4/4/4 = 16
4/4/4/4/4/4/+2 = 26
6
ವಾರ್ಧಕ ಷಟ್ಪದಿ
5/5/5/5/5= 20
5/5/5/5/5/5+2=32

ರಗಳೆ
ಇದು ಪ್ರಾಕೃತ(ಸಂಸ್ಕೃತ) ದ ರಘಟಾ ಎಂಬ ಪದದಿಂದ ರೂಪಗೊಂಡಿದೆ. ಪ್ರಾಚೀನ ಶಾಸನಗಳಲ್ಲಿ ಅಗಲಿ
ಕವಿರಾಜಮಾರ್ಗದಲ್ಲಾಗಲಿ ಬಳಕೆಗೊಂಡ್ಡಿಲ್ಲಾ.
ಇದರ ಮೊದಲ ಪ್ರಯೋಗ ಕಾಣುವುದು ಪಂಪನ ಅಧಿಪುರಾಣ ದಲ್ಲಿ
ಬಹುಶ: ಈ ರಗಳೆಗಳು ಕವಿರಾಜಮಾರ್ಗ ಮತ್ತು ಪಂಪನ ಮದ್ಯೆ ಯಾವುದಾದರೊಂದು ಕಾಲದಲ್ಲಿ
ರೂಪಗೊಂಡಿರಬಹುದು
ಲಕ್ಷಣಗಳು
1.ರಗಳೆಗಳಿಗೆ ಚರಣಗಲ ನಿರ್ಭಂದವಿಲ್ಲದಿದ್ದರು ಪ್ರಾಸಾಕ್ಷರದ ದೃಷ್ಥಿಯಿಂದ ಎರಡು ಸಾಲುಗಳಿರುತವೆ.
2. ಗಣ ನಿಯಮ ವಿಪರ್ಯಾಸವಾಗಿರುತ್ತದೆ, ಇದು ತಾಳಕ್ಕೆ ಹೊಂದಿಕೊಳ್ಳುವುದರಿಂದ ಇದನ್ನು ಹಾಡುಗಬ್ಬಾ ಎನ್ನುತ್ತಾರೆ
3. ಅಂತ್ಯ ಪ್ರಾಸ ಖಡ್ಡಾಯವಾಗಿ ಬಲಕೆಯಾಗಿತ್ತದೆ.
1 ನೇ ನಾಗವರ್ಮ ತನ್ನ ಛಂಧೋಬುದಿಯಲ್ಲಿ 3 ಪ್ರಕಾರದ ರಗಳೆಗಳನ್ನು ಹೇಳುತ್ತಾನೆ.
1. ಉತ್ಸಾಹ ರಗಳೆ 2. ಮಂದಾನಿಲ ರಗಳೆ 3. ಲಲಿತಾ ರಗಳೆ
1. ಉತ್ಸಾಹ ರಗಳೆ : ಇದರಲ್ಲಿ 3 ಪ್ರಕಾರದ ಗಣವಿನ್ಯಾಸವನ್ನು ಕಾಣುತ್ತೇವೆ. ಪ್ರತಿ ಚರಣದಲ್ಲಿ 3 ಮಾತ್ರೆಯ 4 ಗಣಗಳು ಆಧಿ ಪ್ರಾಸ ಖಡ್ಡಾಯವಲ್ಲದಿದ್ದರು ಅಂತ್ಯ ಪ್ರಾಸ ಖಡ್ಡಾಯ
ಉದಾ:1
- U
ತುಂ ಬಿ
- U
ವಿಂ ಡಿ
- U
ಯಾ ತೆ
- U
ಪಾ ಡಿ
3ಮಾತ್ರೆಯ 4 ಗಣಗಳು
- U
ಜ ಕ್ಕ
- U
ವ ಕ್ಕ
- U
ಯಂ ತೆ
- U
ಕೂ ಡಿ
3ಮಾತ್ರೆಯ 4 ಗಣಗಳು
ಉದಾ:2.
- U
ಮಾ ವಿ
U U -
ನ ಡಿ ಯಾ
- U
ಳಾ ಡು
-
ತಂ
3ಮಾತ್ರೆಯ 4 ಗಣಗಳು
- U
ಪಾ ಡ
- U
ವೆ ಯ್ದ
- U
ಕೇ ಳು
-
ತಂ
3ಮಾತ್ರೆಯ 4 ಗಣಗಳು

2.ಮಂದಾನಿಲ ರಗಳೆ : ಪ್ರತಿ ಚರಣದಲ್ಲಿ 4 ಮಾತ್ರೆಯ 4 ಗಣಗಳು,
ಆದಿ ಪ್ರಾಸ ನಿಯತವಲದಿದ್ದರು ಅಂತ್ಯ ಪ್ರಾಸ ಖಡ್ಡಾಯ
- U U
ಸ ತ್ಯ ದ
- -
ಸಾ ಕಾ
- -
ರಂ ಪಂ
- U U
ಚಾ ಕ್ಷ ರಿ

- U U
ನಿ ತ್ಯ ದ
U U -
ನಿ ಳ ಯಂ
- -
ಶ್ರೀ ಪಂ
- U U
ಚಾ ಕ್ಷ ರಿ

- U
ಅ ಲ್ಲಿ
U U U U U
ಸೊ ಗ ಯಿ ಸು ವ
U U U
ಕೃ ತ ಕ
U U U -
ಗಿ ರಿ ಗ ಳಿಂ

- U
ಕ ಲ್ಪ
U U U U U
ತ ರು ಗ ಳ ನೆ
- U
ಪೊ ಲ್ಪ
U U U -
ಮ ರ ಗ ಳಿಂ


3.ಲಲಿತಾ ರಗಳೆ : ಪ್ರತಿ ಚರಣದಲ್ಲಿ 5ಮಾತ್ರೆಯ 4 ಗಣಗಳು
ಆದಿ ಪ್ರಾಸ ನಿಯತವಲದಿದ್ದರು ಅಂತ್ಯ ಪ್ರಾಸ ಖಡ್ಡಾಯ
ಉದಾ:
- U U U
ಇಂ ತು ಕೊ ಡ

U U - U
ಲೆ ರೆ ವಿ ಕ್ಕು
- - U
ದಂ ತೊಂ ದ
- U -
ಕೋ ಲ್ನೆ ಲಂ
- U -
ಸಂ ತ ತಂ
U U - U
ಶಿ ವ ಭ ಕ್ತೆ
- U -
ಬೀ ಜ ವಿ
U U U -
ಕ್ಕು ವ ನೆ ಲಂ


ಅಂಶ ಗಣ
ಅಂಶಗಳಿಂದ ಕೂಡೀದ ಗಣವೇ ಅಂಶ ಗಣ, ಇಲ್ಲಿ ಪದ್ಯವನ್ನು ಅಳೆಯುವ ಮಾನದಂಡ ಅಂಶಗಳು, ಪ್ರತಿ ಗಣದ ಆರಂಭದ ಅಂಶ
2 ಲಘು ಅಥವಾ ಒಂದು ಗುರುವಿನಿಂದ ಕೂಡಿರಬೇಕು
ಇದರಲ್ಲಿ 3 ಪ್ರಕಾರಗಳು
ನಾವರ್ಮ ಜಯಕೀರ್ತಿ ಗುಣಚಂದ
ಬ್ರಹ್ಮಗಣ ರತಿ ಸೂರ್ಯ
ವಿಷ್ಭುಗಣ ಮದನ ಇಂದ್ರ
ರುದ್ರಗಣ ಶರ ಚಂದ್ರ

ತ್ರಿಪದಿ:
ನಾಗವರ್ಮನ ಛಂದೋಬುದಿಯಲ್ಲಿ ತ್ರಿಪದಿಯ ಲಕ್ಷಣವನ್ನು ಗುರಿತಿಸುತ್ತಾನೆ
ಲಕ್ಶಣಗಳು
1. ತ್ರಿಪದಿಯಲ್ಲಿ 3 ಸಾಲುಗಳ ಒಟ್ಟು 11 ಗಣಗಳಿರುತ್ತವೆ
2. 6 ಮತ್ತು 10 ಗಣಗಳು ಬ್ರಹ್ಮ ಗಣಗಳು
3. ಉಳಿದೆಲ್ಲ ಗಣಗಳು ವಿಷ್ಣುಗಣಗಳಾಗಿರುತ್ತವೆ
ಇದು ವಿಷ್ಣು ಪ್ರಧಾನ ಗಣ
ಉದಾ:
- U U U U U - U - U U U U U - U
ತಾ ವ ರೆ ಯ ಗಿ ಡ ಹು ಟ್ಟಿ ದೇ ವ ರಿ ಗೆ ನೆ ರ ಳಾ ದಿ
- - U U U U U U - U U U - U
ನಾ ಹು ಟ್ಟು ಮ ನಿ ಗೆ ಹೆ ರ ವಾ ದೆ ಹ ಡೆ ದ ವ್ವ
- - U U U U U U - U
ನೀ ಹು ಟ್ಟಿ ಮ ನಿ ಗೆ ಹೆ ಸ ರಾ ದೆ

ತ್ರಿಪದಿಯ ಇತಿಹಾಸ
ಮೊದಲು ದೊರೆತದ್ದು ಬಾದಾಮಿ ಅಥವಾ ಕಪ್ಪೆ ಅರಭಟ್ಟನ ಶಾಸನದಲ್ಲಿ
ಇದನು ಇಡಿಯಾಗಿ ಕಾವ್ಯಕ್ಕೆ ಬಳಿಸಿದವರು ಅಕ್ಕ ಮಹಾದೇವಿ
ಅಕ್ಕ ಮಹಾದೇವಿಯ ಕೃತಿ ಯೋಗಾಂಗ ತ್ರಿವಿದಿ
ಇದರೆ ಶ್ರೇಷ್ಠತ್ರೆಯನ್ನು ಸಂದಿಸಿದ್ದು ಸರ್ವಜ್ನನ ನಾಲಿಗೆ ಮೇಲೆ
ಸರ್ವಜ್ನ ತ್ರಿಪದಿಯ ಸಾರ್ವಭೌಮ
20 ನೇ ಶತಮಾನದಲ್ಲಿ ತ್ರಿಪಧಿಯನ್ನು ಇಡಿಯಾಗಿ ತನ್ನ ಕಾವ್ಯದಲ್ಲಿ ಬಳಿಸಿದವರು
ಜಯದೇವಿ ತಾಯಿ ಲಿಗಾಡೆ

ಅಲಂಕಾರಗಳು
ಆರಂಭದಲ್ಲಿ ಭರತನು ಗುರಿತಿಸಿದ ಅಲಂಕಾರಗಳು ನಾಲ್ಕು (4)
1. ಉಪಮಾ ಅಲಂಕಾರ 2. ರೂಪಕ ಅಲಂಕಾರ 3. ದೀಪಕ ಅಲಂಕಾರ ಮತ್ತು 4. ಯಮಕ ಅಲಂಕಾರ
ನಂತರ ಇವುಗಳ ಸಂಖ್ಯ ಬೆಳೆದರೂ ಸಹ ಮುಖ್ಯವಾಗಿ ಗುರಿತಿಸಿಕ್ಕೊಂಡಿದ್ದು ಮಾತ್ರ ಎರಡೆ
ಮುಖ್ಯವಾಗಿ ಅಲಂಕಾರಗಳು 2 ವಿಧಗಳು
1. ಶಬ್ದಾಲಂಕಾರಗಳು : ಕಾವ್ಯದ ಸೌಂದರ್ಯವನ್ನು ಹೆಚ್ಚಿಸುವ ಶಬ್ದಾರ್ಥ ವೈಚಿತ್ರಗಳೆ ಅಲಂಕಾರಗಳು.
2 ಅರ್ಥಾಲಂಕಾರಗಳು : ಕಾವ್ಯದ ಆಂತರಿಕ ಸೌಂದರ್ಯವನ್ನು ಹೆಚ್ಚಿಸುವುದು

1. ಶಬ್ದಾಲಂಕಾರಗಳು : ಕಾವ್ಯದ ಸೌಂದರ್ಯವನ್ನು ಹೆಚ್ಚಿಸುವ ಶಬ್ದಾರ್ಥ ವೈಚಿತ್ರಗಳೆ ಅಲಂಕಾರಗಳು / ಶಬ್ದ ಅಥವಾ ವರ್ಣಗಳ ಚಮತ್ಕಾರಗಳಿಂದ ಕಾವ್ಯದ
ಸೌಂದರ್ಯವನ್ನು ಉಂಟುಮಾಡುವುದು
ಉದಾ: 1. ಎಲ್ಲೋ ಹೂವಿನ ಸಿರಿ ಬೆಳ್ಳಿ ಕಾಲುಂಗರ
ಹಳ್ಳದ ನೀರು ತರುತಾಳ ನನ್ನ ಗೆಳತಿ
ಹಳ್ಳಿ ಗೌಡರ ಕಿರಿಮಗಳು
2. ಮಾರಯರು ಬೈದಾರು ಬಾರವೋ ಕಣ್ಣೀರು
ಮಾರಯರ ತಮ್ಮ ಮೈದುನ ಬೈದಾರ
ಮಾಡಿಲ್ಲದ ಮಳೆ ಸುರಿದಾಂಗ
ಶಬ್ದಾಲಂಕಾರಗಳಲ್ಲಿ ಮುಖ್ಯವಾಗಿ 3 ವಿಧ
1. ಅನುಪ್ರಾಸ 2.ಯಮಕ 3 ಚಿತ್ರಕವಿತ್ವ
1. ಅನುಪ್ರಾಸ: ಶಬ್ದ ಅಥವಾ ವರ್ಣ ಚಮತ್ಕಾರಗಳ ಮೂಲಕ ಕಾವ್ಯಕ್ಕೆ ಸೊಬಗನ್ನು ತಂದು ಕೊಡುವ ಅಲಂಕಾರ
ಉದಾ: ಕಾಡಿಗೆ ಹಚ್ಚಿದ ಕಣ್ಣು ತೀಡಿ ಮಾಡಿದ ಹುಬ್ಬು
ಅನುಪ್ರಾಸದಲ್ಲಿ 2 ವಿಧ 1. ವೃತ್ತಾನುಪ್ರಾಸ ಮತ್ತು 2. ಛೇಕಾನುಪ್ರಾಸ
ವೃತ್ತಾನುಪ್ರಾಸ : ಒಂದು ವ್ಯಂಜನ ಪದ್ಯದ ಒಂದು ಚರಣದಲ್ಲಿ ಅಥವಾ ಸಂಪೂರ್ಣ ಪದ್ಯದಲ್ಲಿ ಪುನರಾವರ್ತನೆಯಾಗುವುದು
ಉದಾ: ಕರಮಿಶದತ್ತ ಕಾಮುದಿಯ ಚಿತ್ತ
ಚಕೋರಿಯ ತುತ್ತ ನೀರತೋತದ ವಿಪತ್ತು ತಾರೆಗಳ ತುತ್ತು
ಛೇಕಾನುಪ್ರಾಸ: ಎರಡು ವ್ಯಂಜನ ಪದ್ಯದ ಒಂದು ಚರಣದಲ್ಲಿ ಅಥವಾ ಸಂಪೂರ್ಣ ಪದ್ಯದಲ್ಲಿ ಪುನರಾವರ್ತನೆಯಾಗುವುದು
ಉದಾ: ನೀಡಿ ನೀಡಿ ಕೆಟ್ಟರು ನಿಜವಿಲ್ಲದೇ
ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ
2.ಯಮಕಾಲಂಕಾರ: ಮೂರು ಅಥವಾ ಅದಕಿಂತ ಹೆಚ್ಚು ವ್ಯಂಜನ ಪದ್ಯದ ಒಂದು ಚರಣದಲ್ಲು ಅಥವಾ ಸಂಪೂರ್ಣ ಪದ್ಯದಲ್ಲು ಪುನರಾವರ್ತನೆ ಯಾಗುವುದು
ಉದಾ: ಬರಹೇಳ್ ನಿಕುಂಭನಂ ಶುಂಭನಂ ಜಂಭನಂ
ಬರಹೇಳ್ ಸಬಲನಂ ಪ್ರಬಲನಂ ಸುಬಲನಂ
ಬರಹೇಳ್ ಮಾಹ ನಂಭನಂ
3. ಚಿತ್ರಕವಿತ್ವ : ಅಕ್ಷರಗಳನ್ನು ಕುಶಲತೆಯಿಂದ ಆರಿಸಿ ಜೋಡಿಸಿ ಕವಿಗಳು ಉಂಟುಮಾಡುವ ವೈಚಿತ್ರ್ಯ
ಉದಾ: ನನ್ದನ ನನ್ದನ ನುನ್ನೊನ್ದನ
ಮೈ ಮುನ್ದೆ ನಿನ್ದೆದೆನ್ದೆನೆ ಮುದದಿ
2 ಅರ್ಥಾಲಂಕಾರಗಳು: ಕಾವ್ಯದ ಆಂತರಿಕ ಸೌಂದರ್ಯವನ್ನು ಹೆಚ್ಚಿಸುವುದು / ಅರ್ಥ ಚಮತ್ಕಾರದ ಮೂಲಕ ಕಾವ್ಯದ ಸೊಬಗನ್ನು ಹೆಚ್ಚಿಸುವುದು
ಇದರಲ್ಲಿ ಸುಮಾರು 120 ಬಗೆಗಳಿದ್ದರು ಮುಖ್ಯವಾಗಿ ಗುರುತಿಸಿಕೊಳ್ಳುವುದು 6 ಮಾತ್ರ
1. ಉಪಮಾ ಅಲಂಕಾರ 2. ರೂಪಕ ಅಲಂಕಾರ 3. ದೃಷ್ಠಾಂತ ಅಲಂಕಾರ 4.ಶ್ಲೇಷಾಲಂಕಾರ 5. ದೀಪಕ ಅಲಂಕಾರ ಮತ್ತು 6.ಉತ್ಪ್ರೇಕ್ಷಾಲಂಕಾರ
1. ಉಪಮಾ ಅಲಂಕಾರ : ಎರಡು ವಸ್ತು/ವ್ಯಕ್ತಿಗಳ ಮದ್ಯೆ ಇರುವ ಸದೃಶ ಹೋಲಿಕೆ ಸಂಪತ್ತನು ವರ್ಣಿಸುವುದು
ಇದು ನಾಲ್ಕು(4) ಅಂಶಗಳಾದ ಉಪಮಾನ, ಉಪಮೇಯ, ಉಪಮವಾಚಕ ಮತ್ತು ಸಮಾನಧರ್ಮ/ಉಭಯವಾಚಕ
ಗಳನ್ನೊಳಗೊಂಡಿರುತ್ತದೆ.
ಉದಾ: 1. ಪೀತಾಂಬರವನ್ನುಟ್ಟ ಶ್ರೀ ಕೃಷ್ಣ ಕುಂದಣದಲ್ಲಿಟ್ಟ ರತ್ನದಂತೆ ಹೊಳೆಯುತಿದ್ದ
ಉಪಮಾನ, (ಯಾವುದಕ್ಕೆ ಹೋಲಿಸುತ್ತೇವೋ ಅದು) : ರತ್ನ
ಉಪಮೇಯ, (ಯಾವುದನ್ನು ಹೋಲಿಸುತ್ತೇವೆ) : ಶ್ರೀ ಕೃಷ್ಣ
ಉಪಮವಾಚಕ (ಹೋಲಿಕೆಯ ರೀತಿ. ಅಂತೆ, ಅಂತಿರೆ, ಓಲ್) : ಅಂತೆ
ಸಮಾನಧರ್ಮ/ಉಭಯವಾಚಕ : ಉಪಮಾನ ಮತ್ತು ಉಪಮೇಯದಲ್ಲಿರುವ ಸಮಾನ ಅಂಶ : ಮೇಲಿನ ಉದಾಹರಣೆಯಲ್ಲಿ : ಹೊಳೆಯುವುದು

ಉದಾ:2. ದಸರಾ ಕಾಲದ ಮೈಸೂರು ಇಂದ್ರನ ಅಮರಾವತಿಯಂತೆ ಝಗ ಝಗಸುತ್ತದೆ
ಉಪಮಾನ, (ಯಾವುದಕ್ಕೆ ಹೋಲಿಸುತ್ತೇವೋ ಅದು) : ಅಮರಾವತಿ
ಉಪಮೇಯ, (ಯಾವುದನ್ನು ಹೋಲಿಸುತ್ತೇವೆ) : ಮೈಸೂರು
ಉಪಮವಾಚಕ (ಹೋಲಿಕೆಯ ರೀತಿ. ಅಂತೆ, ಅಂತಿರೆ, ಓಲ್) : ಅಂತೆ :
ಸಮಾನಧರ್ಮ/ಉಭಯವಾಚಕ : ಉಪಮಾನ ಮತ್ತು ಉಪಮೇಯದಲ್ಲಿರುವ ಸಮಾನ ಅಂಶ : ಮೇಲಿನ ಉದಾಹರಣೆಯಲ್ಲಿ : ಝಗ ಝಗಸುತ್ತದೆ
ಉಪಮಾಲಂಕಾರಗಳಲ್ಲಿ ಪ್ರಮುಖವಾಗಿ ಎರಡು ವಿಧ
1. ಪೂರ್ಣೋಪಮೇ ಅಲಂಕಾರ ಮತ್ತು 2. ಲುಪ್ತೋಪಮೇ ಅಲಂಕಾರ
1. ಪೂರ್ಣೋಪಮೇ ಅಲಂಕಾರ : ಇದು ನಾಲ್ಕು(4) ಅಂಶಗಳಾದ ಉಪಮಾನ, ಉಪಮೇಯ, ಉಪಮವಾಚಕ ಮತ್ತು ಸಮಾನಧರ್ಮ/ಉಭಯವಾಚಕ
ಗಳನ್ನೊಳಗೊಂಡಿರುತ್ತದೆ
ಉದಾ: ದಸರಾ ಕಾಲದ ಮೈಸೂರು ಇಂದ್ರನ ಅಮರಾವತಿಯಂತೆ ಝಗ ಝಗಸುತ್ತದೆ
ಉಪಮಾನ, (ಯಾವುದಕ್ಕೆ ಹೋಲಿಸುತ್ತೇವೋ ಅದು) : ಅಮರಾವತಿ
ಉಪಮೇಯ, (ಯಾವುದನ್ನು ಹೋಲಿಸುತ್ತೇವೆ) : ಮೈಸೂರು
ಉಪಮವಾಚಕ (ಹೋಲಿಕೆಯ ರೀತಿ. ಅಂತೆ, ಅಂತಿರೆ, ಓಲ್) : ಅಂತೆ :
ಸಮಾನಧರ್ಮ/ಉಭಯವಾಚಕ : ಉಪಮಾನ ಮತ್ತು ಉಪಮೇಯದಲ್ಲಿರುವ ಸಮಾನ ಅಂಶ : ಮೇಲಿನ ಉದಾಹರಣೆಯಲ್ಲಿ : ಝಗ ಝಗಸುತ್ತದೆ

2.ಲುಪ್ತೋಪಮೇ ಅಲಂಕಾರ : ಇದರಲ್ಲಿ ನಾಲ್ಕು(4) ಅಂಶಗಳಲ್ಲಿ ಯಾವುದಾದರೊಂದು ಅಂಶ ಇಲ್ಲವಾಗಿರುತ್ತದೆ
ಉದಾ: ಅವಳ ಮುಖವು ಚಂದ್ರನಂತಿದೆ
ಉಪಮಾನ, (ಯಾವುದಕ್ಕೆ ಹೋಲಿಸುತ್ತೇವೋ ಅದು) : ಚಂದ್ರ
ಉಪಮೇಯ, (ಯಾವುದನ್ನು ಹೋಲಿಸುತ್ತೇವೆ) : ಮುಖ
ಉಪಮವಾಚಕ (ಹೋಲಿಕೆಯ ರೀತಿ. ಅಂತೆ, ಅಂತಿರೆ, ಓಲ್) : ಅಂತೆ :
ಸಮಾನಧರ್ಮ/ಉಭಯವಾಚಕ : ಉಪಮಾನ ಮತ್ತು ಉಪಮೇಯದಲ್ಲಿರುವ ಸಮಾನ ಅಂಶ : ಮೇಲಿನ ಉದಾಹರಣೆಯಲ್ಲಿ : ಇಲ್ಲ
2. ರೂಪಕ ಅಲಂಕಾರ: ಉಪಮಾನ(ಹೋಲಿಸಿಕೊಳ್ಳುವುದು) ಉಪಮಾನ(ಹೋಲಿಸಲ್ಪಡುವುದು) ಒಂದೆ ಎಂದು ವರ್ಣಿತವಾಗುವುದು
ಉದಾ: ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವೈಯ್ಯಾ

3. ದೃಷ್ಠಾಂತ ಅಲಂಕಾರ: ಬಳಕೆಗೊಳ್ಳುವ ಎರಡು ವಾಕ್ಯಗಳು ಪ್ರತಿಬಿಂಬದಂತೆ ವರ್ಣಿತವಾಗುವುದು
ಸಾಮಾನ್ಯವಾಗಿ ಇದರಲ್ಲಿ ಬರುವುದು ಗಾದೆ ಮಾತುಗಳು
ಉದಾ: ಊರ ಉಪಕಾರ ಅರಿಯದು ಹೆಣ ಶೃಂಗಾರ ಅರಿಯದು
ಮಾತು ಬಲ್ಲವನಿಗೆ ಜಗಳವಿಲ್ಲ, ಊಟಬಲ್ಲವನಿಗೆ ರೋಗವಿಲ್ಲ
4.ಶ್ಲೇಷಾಲಂಕಾರ: ಒಂದೇ ಶಬ್ದದಲ್ಲಿ ನಾನ ಅರ್ಥಗಳು ಬರುವಂತೆ ವರ್ಣಿಸುವುದು.
ಉದಾ: ಶ್ರೀಯುವತಿ ಪ್ರಿಯಂ ಬಲವಿತಂ ಬಲಿದರ್ಪ ಹರಂ.
ಇಲ್ಲಿ: ಶ್ರೀಯುವತಿ ಪ್ರಿಯಂ ಎಂದರೆ ಒಂದೇ ಅರ್ಥ ವಿಷ್ಣು ಇನ್ನೊಂದು ಅರ್ಥದಲ್ಲಿ ಸಂಪತ್ತಿನ ಒಡೆಯ ರಾಜ
5. ದೀಪಕ ಅಲಂಕಾರ: ಪ್ರಸ್ತುತ ಮತ್ತು ಅಪ್ರಸ್ತುತ ವಸ್ತುಗಳ ವ್ಯಕ್ತಿಗಳಿಗೆ ಒಂದೆ ಧರ್ಮವಿದೆ ಎಂದು ವರ್ಣಿಸುವುದು
ಉದಾ: ಗಿಳಿಮರಿ ನೆರೆಯದ ನಂದನ ವಳಿಸಿಸು ವಿಹರಿಸು ಪೂಗಳ ಕಳವರದಿಂ
ದೆಳೆಯಂಚೆಡಿಯಿಡದ ತಣ್ಬುಳ್ಳಿ ಬರ್ಬರ ನಾಡದ ದಂಗಳಂ ಮಂಜುಳ ಮಲ್ಲಿ
ಮೇಲಿನ ಉದಾಹರಣೆಯಲ್ಲಿ ::ಗಿರಿಮರಿಯಿಲ್ಲದ ತೋಟ, ಮರಿದುಂಬಿಯಿಲ್ಲದ ತೋಟ, ಹಂಸಗಳಿಲ್ಲದ ಸರೋವರ
ಇವೆಲ್ಲವೂ ಅಪ್ರಸ್ತುತ
ಮಕ್ಕಳಾಡದ ಅಂಗಳ ಅಂಗಳವಲ್ಲ ಎನ್ನುವುದು ಪ್ರಸ್ತುತ
6.ಉತ್ಪ್ರೇಕ್ಷಾಲಂಕಾರ: ಉಪಮಾನ ಅಥವಾ ಉಪಮೇಯ ಕವಿ ಕಲ್ಪಿತವಾಗಿರುವುದು
ಉದಾ;ನೀ ಉಟ್ಟ ರೇಷ್ಮೆಗಿಂತ ನಿನ್ನ ಮೈ ನುಣುಪ
ಬೆಟ್ಟದ ಅರಿಗಿಳಿಗಿಂತ ನಿನ್ನ ನುಡಿ ಇಂಪು
ರಸಗಳು
ಅಭಿನವ ಗುಪ್ತನ ಪ್ರಕಾರ ರಸಗಳು 9 ಪ್ರಕಾರಗಳು
ಕ್ರ. ಸಂ
ರಸ
ಸ್ಥಾಯಿ ಭಾವ
ಬಣ್ಣ
ಅಧಿ ದೇವತೆ
1
ಶೃಂಗಾರ
ರತಿ
ನೀಲಿ
ವಿಷ್ಣು
2
ಹಾಸ್ಯ
ಹಾಸ
ಬಿಳಿ
ಗಣಪತಿ
3
ಕರುಣೆ
ಶೋಕ
ಕಪೋತ
ಯಮ
4
ರೌದ್ರ
ಕ್ರೋದ
ರಕ್ತ
ಈಶ್ವರ
5
ವೀರ
ಉತ್ಸಾಹ
ಹೇಮ
ಇಲ್ಲ
6
ಭಯಾನಕ
ಭಯ
ಕಪ್ಪು
ಕಾಲದೇವತೆ
7
ಭೀಬತ್ಸ
ಜುಗುಪ್ಸೆ
ನೀಲಿ
ಮಹಾಕಾಲ
8
ಅದ್ಭುತ
ವಿಸ್ಮಯ
ಹಳದಿ
ಇಲ್ಲ
9
ಶಾಂತ ರಸ
ಕ್ಷಮೆ
ಇಲ್ಲ
ಇಲ್ಲ

10 comments:

  1. hi helo just know i opened your blog spot its in your kannada i cant read this.

    ReplyDelete
  2. ತುಂಬಾ ಉಪಯುಕ್ತವಾದ ಬ್ಲಾಗು. ನಿಮ್ಮ ಶ್ರಮಕ್ಕೆ ನನ್ನ ನಮಸ್ಕಾರಗಳು

    ಶಿವಶಂಕರ್ ಎಸ್.ಜಿ

    ReplyDelete
  3. THIS IS EX-LENT.THANK FOR GIVING INFORMATION.

    ReplyDelete
  4. its very useful information.... thanks for giving such wonderful information..

    ReplyDelete
  5. ಕಾ.ವೆಂ.ಶ್ರೀಯವರೇ, ನಿಜಕ್ಕೂ ನಿಮ್ಮ ಕಾರ್ಯವನ್ನು ಮೆಚ್ಚಲೇಬೇಕು. ಏಕೆಂದರೆ ಒಬ್ಬ ಕನ್ನಡ ಬಾಷಾ ಶಿಕ್ಷಕನು ಮಾಡಬಹುದಾದ ಕಾರ್ಯವನ್ನು ನೀವು ಮಾಡಿದ್ದಕ್ಕೆ ನಿಮ್ಮನ್ನು ಅಭಿನಂದಿಸಲೇಬೇಕು. ಅದೂ ಒಬ್ಬ ಸೀನಿಯರ್ ಮ್ಯಾನೇಜರ್ ಆಗಿ . ನಿಮಗೆ ಮತ್ತೊಮ್ಮೆ ನಮ್ಮ ನಮನಗಳು.
    ಆರ್.ಬಿ.ಗುರುಬಸವರಾಜ

    ReplyDelete
  6. sir dayaviTTu... background color chnage maaDi... aidu niMisha Odidre tale suttatte...

    ReplyDelete
  7. ಧನ್ಯವಾದಗಳು ಸ್ನೇಹಿತರೇ

    ReplyDelete
  8. ಉತ್ತಮವಾಗಿ ಕನ್ನಡದ ಬಗ್ಗೇ ವೀವರಣಿ ನೀಡಿದ್ದಕ್ಕೆ ತಮಗೆ ದನ್ಯವಾದಳು ಸರ

    ReplyDelete
  9. ಕೈತುತ್ತು ಪದದ ಸಮಾನರ್ಥಕ ಪದ ಕನ್ನಡದಲ್ಲಿ ಗೊತ್ತಿದ್ದರೆ ದಯವಿಟ್ಟು ತಿಳಿಸಿ

    ReplyDelete
  10. ಸೂಪರ್ ಕನ್ನಡ ಗ್ರಾಮರ್

    ReplyDelete